ಕೃಷಿ ಅಭಿವೃದ್ಧಿಗೆ ಕೃಷಿ ವಿವಿ ಕೊಡುಗೆ ಅಪಾರ: ಸುಂದರೇಶಬಾಬು ಬಣ್ಣನೆ

oplus_2
oplus_2
Published on

ರಾಯಚೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆರಂಭಕ್ಕೂ ಮೊದಲೇ ಈ ಭಾಗದಲ್ಲಿ ಕೃಷಿ ಸಂಶೋಧನೆಗಳು ನಡೆಯುತ್ತಿದ್ದವು ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಎಂ.ಸುಂದರೇಶಬಾಬು ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಹಮ್ಮಿಕೊಂಡಿದ್ದ ವಿವಿಯ 16ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿ, ಕೃಷಿ ವಿವಿಯು ಗುಣಮಟ್ಟದ ಶಿಕ್ಷಣ, ಕೃಷಿಯಲ್ಲಿ ತಂತ್ರಜ್ಞಾನದ ಬಳಕೆಯ ಕುರಿತು ರೈತರಿಗೆ ತಿಳಿಸುವುದು ಹಾಗೂ ಕೃಷಿ ವಲಯದಲ್ಲಿ ಹೊಸ ಸಂಶೋಧನೆ ಮಾಡುವ ಮೂಲಕ ಈ ಭಾಗದ ರೈತರಿಗೆ ದೊಡ್ಡ ಕೊಡುಗೆಯಾಗಿದೆ ಎಂದು ತಿಳಿಸಿದರು.

ಭಾರತ ಕೃಷಿ ಅವಲಂಬಿತ ದೇಶವಾಗಿದ್ದು, ಅದರಲ್ಲೂ ಕರ್ನಾಟಕ ರಾಜ್ಯ ವೈವಿಧ್ಯಮಯ ಭಗೋಳಿಕ ಪ್ರದೇಶಗಳನ್ನು ಹೊಂದಿದೆ ಜತೆಗೆ ವಾತವರಣದಲ್ಲೂ ವಿಭಿನ್ನವಾಗಿದೆ. ರಾಯಚೂರು ಕೃಷಿ ವಿವಿ ಆರಂಭವಾಗುವ ಮೊದಲಿನಿಂದಲೂ ಈ ಭಾಗದಲ್ಲಿ ಕೃಷಿ ಸಂಶೋಧನೆಗಳು ನಡೆಯುತ್ತಿದ್ದವು. ವಿವಿಯ ಸ್ಥಾಪನೆಯಾದ ನಂತರ ಕೃಷಿ ವಲಯದಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗಿದೆ ಎಂದರು.

ಬೇಸಾಯ ಕ್ರಮಗಳ ಕುರಿತು ಮಾಹಿತಿ ನೀಡಲು ಕೃಷಿ ಇಲಾಖೆ ಇದ್ದರೂ. ಕೃಷಿ ಶಿಕ್ಷಣ, ವಿಸ್ತರಣೆ ಮತ್ತು ಸಂಶೋಧನೆಗೆ ಕೃಷಿ ವಿವಿ ಸಹಕರಿಯಾಗಿದೆ. ಒಣಭೂಮಿ, ನೀರಾವರಿ, ಅಂತರ್ಜಲದ ಮೂಲಕ ಕೃಷಿ ಮಾಡುವ ಬಗ್ಗೆ ಮಾಹಿತಿ ನೀಡಿಲು ಹಾಗೂ ಕೃಷಿಯಲ್ಲಿ ಹೊಸ ಹೊಸ ಸಂಶೋಧನೆಗಳನ್ನು ನಡೆಸುವಲ್ಲಿ ವಿವಿಯ ಕಾರ್ಯ ಅತಿಮುಖ್ಯವಾಗಿರುತ್ತದೆ ಎಂದರು.

ಕೃಷಿ ವಿವಿಯ 16 ನೇ ಸಂಸ್ಕೃಥಾಪನೆ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಯ ವಿವಿಧ ಕ್ಷೇತ್ರಗಳ ಸಿಬ್ಬಂದಿ ಹಾಗೂ ಕಾರ್ಮಿಕರಿಗೆ ಸನ್ಮಾನಿಸಲಾಯಿತು.
ಕೃಷಿ ವಿವಿಯ 16 ನೇ ಸಂಸ್ಕೃಥಾಪನೆ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಯ ವಿವಿಧ ಕ್ಷೇತ್ರಗಳ ಸಿಬ್ಬಂದಿ ಹಾಗೂ ಕಾರ್ಮಿಕರಿಗೆ ಸನ್ಮಾನಿಸಲಾಯಿತು.

ಕೃಷಿ ವಿವಿಯ ವಿದ್ಯಾರ್ಥಿಗಳು ವಿವಿಯಲ್ಲಿ ಮೋಜು ಮಾಡುವ ಜತೆಗೆ ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿದಾಗ ಮಾತ್ರ ಮುಂದೆ ಉತ್ತಮ ಭವಿಷ್ಯ ಕಾಣಬಹುದಾಗಿದೆ. ಸ್ನಾತಕೋತ್ತರ ಒಂದು ಪ್ಯಾಕೇಜ್ ಇದ್ದಂತೆ ಅದರಲ್ಲಿ ಸಿಗುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಬಸನಗೌಡ ಬ್ಯಾಗವಾಟ್, ಡಿ.ಮಲ್ಲಿಕಾರ್ಜುನ, ಮಲ್ಲೇಶ ಕೊಲಿಮಿ, ಮಧುಸೂದನ ರೆಡ್ಡಿ, ತಿಮ್ಮಣ್ಣ ಸೋಮಪ್ಪ ಚಾವಡಿ, ವಿವಿ ಕುಲಪತಿ ಎಂ.ಹನುಮಂತಪ್ಪ, ವಿಶ್ರಾಂತ ಕುಲಪತಿ ಬಿ.ವಿ ಪಾಟೀಲ್, ಕುಲಸಚಿವ ಡಾ.ಎಂ.ವೀರನಗೌಡ, ವಿಸ್ತರಣಾ ನಿರ್ದೇಶಕ ಡಾ.ಎನ್.ಶಿವಶಂಕರ, ಡೀನ್‌ಗಳಾದ ಡಾಗುರುರಾಜ ಸುಂಕದ, ಡಾ.ಎಸ್.ಬಿ.ಗೌಡಪ್ಪ, ಡಾ.ಕೆ.ನಾರಾಯಣ ರಾವ್, ಡಾ.ಮಲ್ಲಿಕಾರ್ಜುನ ಅಯ್ಯನಗೌಡರ್, ಡಾ.ಎಂ.ಎಂ.ಧನೋಜಿ, ಡಾ.ಪಿ.ಹೆಚ್ ಕುಚನೂರು, ಗಂಗಾವತಿ ಕೃಷಿ ಮಹಾವಿದ್ಯಾಲಯದ ವಿಶೇಷಾಧಿಕಾರಿ ಡಾ.ಜೆ.ವಿಶ್ವನಾಥ, ಆಡಳಿತಾಧಿಕಾರಿ ಡಾ.ಜಾಗೃತಿ ದೇಶಮಾನೆ, ಆಸ್ತಿ ಅಧಿಕಾರಿ ರವಿ ಮೆಸ್ತಾ, ಹಣಕಾಸು ನಿಯಂತ್ರಾಣಾಧಿಕಾರಿ ಹನುಮೇಶ ನಾಯಕ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net