

ರಾಯಚೂರು: ಅಕ್ರಮ ಮರಳು ಸಾಗಣೆಗೆ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿರುವ ಮಾನ್ವಿ ತಹಸೀಲ್ದಾರ್ ಸಂತೋಷಿ ರಾಣಿ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ಡಿಸಿ ಕಚೇರಿ ಮುಂದೆ ಮಾನ್ವಿ ತಾಲೂಕು ವಾಲ್ಮೀಕಿ ನಾಯಕ ಸಂಘ ಬುಧವಾರ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತ ಕುಮಾರಗೆ ಮನವಿ ಸಲ್ಲಿಸಿತು. ತುಂಗಭದ್ರಾ ನದಿ ತೀರದ ಗ್ರಾಮಗಳಾದ ಚೀಕಲಪರ್ವಿ, ರಾಜೊಳ್ಳಿ, ಜೂಕೂರು, ಮದ್ದಾಪುರ, ಕಾತರಕಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿದೆ. ಸರ್ಕಾರಕ್ಕೆ ರಾಯಲ್ಟಿ ನೀಡದೆ ಬೊಕ್ಕಸಕ್ಕೆ ನಷ್ಟವುಂಟು ಮಾಡಲಾಗುತ್ತಿದೆ. ತಹಸೀಲ್ದಾರ್ ಟಿಪ್ಪರ್‌ಗೆ 30 ಸಾವಿರ ರೂ. ಪಡೆಯುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಸಂಘದ ಪದಾಧಿಕಾರಿಗಳಾದ ಈರೇಶ ನಾಯಕ, ಶಕುಂತಲಾ ದೇವಿ, ಚಿದಾನಂದ ಸ್ವಾಮಿ, ವೆಂಕಟೇಶ ನಾಯಕ ಇದ್ದರು.