ಅದಾನಿ- ಕೇಂದ್ರ ಸರ್ಕಾರದ ನಡುವೆ ಅಪವಿತ್ರ ಮೈತ್ರಿ: ಎಸ್.ಆರ್.ಹಿರೆಮಠ

oplus_2
oplus_2
Published on

ರಾಯಚೂರು: ಉದ್ಯಮಿ ಗೌತಮ್ ಅದಾನಿ ಹಾಗೂ ಆತನ ಕಂಪನಿಯಿಂದ ನಡೆಯುತ್ತಿರುವ ಅವ್ಯವಹಾರಗಳು ಹಾಗೂ ಭ್ರಷ್ಟಾಚಾರಗಳ ಬಗ್ಗೆ ಜನರಿಗೆ ಮಾಹಿತಿ ಮುಟ್ಟಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಜನಾಂದೋಲನ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಿಟಿಜನ್ಸ್ ಫಾರ್ ಡೆಮೊಕ್ರಸಿ ಹಾಗೂ ಜನಾಂದೋಲನಾ ಮಹಾಮೈತ್ರಿ ಸಂಘಟನೆಯ ಅಧ್ಯಕ್ಷ ಎಸ್.ಆರ್.ಹಿರೆಮಠ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅದಾನಿ ಕಂಪನಿಗಳ ಅಕ್ರಮಗಳಿಗೆ ಕಡಿವಾಣವಿಲ್ಲದಂತಾಗಿದ್ದು, ಅದಾನಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ಅಪವಿತ್ರ ಮೈತ್ರಿಯನ್ನು ಹೊಂದಿದೆ ಎಂದರು.

ಅದಾನಿ ಕಂಪನಿಗಳ ವಿರುದ್ಧ ಅಮೇರಿಕಾದಲ್ಲಿ ಭ್ರಷ್ಟಾಚಾರ ಹಾಗೂ ಶೇರುಗಳ ಬಗ್ಗೆ ಅವ್ಯವಹಾರದ ಆಪಾದನೆಯನ್ನು ಮಾಡಲಾಗಿದೆ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಆಂದೋಲನವನ್ನು ನಡೆಸುವ ಕುರಿತು 2025ರ ಜ.18ರಂದು ದೆಹಲಿಯಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ದೇಶದ ಪ್ರತಿಯೊಬ್ಬರು ಈ ಭ್ರಷ್ಟಾಚಾರದ ಬಗ್ಗೆ ತಿಳಿದುಕೊಂಡು 2029ರ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಪಕ್ಷಕ್ಕೆ ಬೆಂಬಲ ನೀಡಬೇಕು, ಜತೆಗೆ ದೇಶದಲ್ಲಿ ಜನಪರವಾದ ಹೊಸಪಕ್ಷ ಬರಬೇಕಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಜಾನ್‌ವೆಸ್ಲಿ, ರವಿಕೃಷ್ಣ, ಖಾಜಾ ಅಸ್ಲಂ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net