ಬಿರುಗಾಳಿಗೆ ಮನೆ ಮೇಲೆ ಬಿದ್ದ ಬೃಹತ್ ಮರ, ತಪ್ಪಿದ ಭಾರಿ ಅನಾಹುತ

17052020 Raichur tree falling House
Published on

ರಾಯಚೂರು: ಗಾಳಿ ಬೀಸಿದ ಪರಿಣಾಮ ತಾಲೂಕಿನ ಗಡಿ ಭಾಗದಲ್ಲಿನ ಬುಳ್ಳಾಪುರ ಗ್ರಾಮದ ಎರಡು ಮನೆಗಳ ಮೇಲೆ ಶನಿವಾರ ಬೃಹತ್ ಮರ ಬಿದ್ದಿದೆ. ಕೆಲ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.

ಶನಿವಾರ ತಡರಾತ್ರಿ ಬೀಸಿದ ಗಾಳಿಗೆ ತಾಲೂಕಿನ ಬುಳ್ಳಾಪುರದಲ್ಲಿ ಮುಕ್ಕಣ್ಣ ಹಾಗೂ ಯಂಕೋಬಾ ಎನ್ನುವವರ ಮನೆ ಮೇಲೆ ಮರ ಮುರಿದು ಬಿದ್ದಿದೆ. ಮನೆಯ ಕುಂಬೆ ಹಾಗೂ ಮುಂದೆ ಹಾಕಿದ ತಗಡಿನ ಶೆಡ್ ಸಂಪೂರ್ಣ ಹಾನಿಯಾಗಿದೆ. ನಿತ್ಯ ಮನೆ ಮೇಲೆ ಹಾಗೂ ಹೊರಗಡೆ ಮಲಗುತ್ತಿದ್ದವರು ಅದೃಷ್ಟವಶಾತ್ ಮನೆಯೊಳಗೆ ಮಲಗಿದ್ದರಿಂದ ಅನಾಹುತ ತಪ್ಪಿದಂತಾಗಿದೆ.

ತಾಲೂಕಿನ ಗಿಲ್ಲೇಸುಗೂರು ಹೋಬಳಿ ವಿವಿಧ ಗ್ರಾಮಗಳಲ್ಲಿ ಭಾರಿ ಗಾಳಿಯಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ವಿದ್ಯುತ್ ತಂತಿಗಳು ಜೋತು ಬಿದ್ದಿದ್ದರಿಂದ ಪದೇ, ಪದೆ ಲೈನ್ ಟ್ರಿಪ್ ಆಗುತ್ತಿದ್ದರಿಂದ ಬೆಳಗಿನವರೆಗೆ ಪೂರೈಕೆ ಸಾಧ್ಯವಾಗಲಿಲ್ಲ. ಬೆಳಗ್ಗೆ ಜೆಸ್ಕಾಂನ ಶಾಖಾಧಿಕಾರಿಗಳ ನೇತೃತ್ವದಲ್ಲಿ ಜೋತು ಬಿದ್ದ ವಿದ್ಯುತ್ ತಂತಿಗಳ ಸರಿಪಡಿಸುವ ಕಾರ್ಯದಲ್ಲಿ ಲೈನ್‌ಮೆನ್‌ಗಳು ಹಾಗೂ ಗ್ರಾಮಸ್ಥರು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net