ಶೇ. 31.08 ವಿದ್ಯಾರ್ಥಿಗಳು ಶಾಲೆಗೆ ಹಾಜರು, ಶಾಲೆಗೆ ಬಂದವರು 37,369 ಮಕ್ಕಳು

22022021 Raichur school start
Published on

ರಾಯಚೂರು, 6 ರಿಂದ 8ನೇ ತರಗತಿ, ಶಾಲೆ ತರಗತಿ ಆರಂಭ, ಕರೊನಾ ನಿಯಮ ಪಾಲನೆ,
Raichur, 6th to 8th grade, school Class Start, Corona law enforcement,

ರಾಯಚೂರು: ಸರ್ಕಾರ 6 ರಿಂದ 8ನೇ ತರಗತಿಗಳನ್ನು ಸೋಮವಾರದಿಂದ ಆರಂಭಿಸಲು ಅನುಮತಿ ನೀಡಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತರಗತಿಗಳಿಗೆ ಆಗಮಿಸದಿರುವುದು ಜಿಲ್ಲೆಯ ಕಂಡು ಬಂತು.

ಜಿಲ್ಲೆಯಲ್ಲಿ 6 ರಿಂದ 8ನೇ ತರಗತಿಗಳಿಗೆ ಒಟ್ಟು 1,17,509 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದು, ಈ ಪೈಕಿ ಸೋಮವಾರ 37,369 ವಿದ್ಯಾರ್ಥಿಗಳು ತರಗತಿಗೆ ಬಂದಿದ್ದರು. ಇದನ್ನು ಪರಿಗಣಿಸಿದರೆ ಶೇ.31.08 ಹಾಜರಾತಿ ಸೋಮವಾರ ಇತ್ತು. ಮುಂದಿನ ಒಂದೆರಡು ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಶಿಕ್ಷಕರು ಆಶಯ ವ್ಯಕ್ತಪಡಿಸಿದ್ದಾರೆ.

ಶಾಲೆಗಳಲ್ಲೇ 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ತರಗತಿ ನಡೆಸಲಾಗುತ್ತಿತ್ತು. ಸೋಮವಾರದಿಂದ ಹಿಂದಿನಂತೆ ತರಗತಿ ನಡೆಸಲು ಅವಕಾಶ ನೀಡಿದ್ದರೂ ಬಹುತೇಕ ಶಾಲೆಗಳಲ್ಲಿ ಪರಸ್ಪರ ಅಂತರ ಕಾಪಾಡಿಕೊಂಡು, ತರಗತಿ ಕೊಠಡಿಗಳ ಬದಲು ಶಾಲೆಯ ಹೊರ ಆವರಣದಲ್ಲೇ ತರಗತಿಗಳನ್ನು ನಡೆಸಲಾಯಿತು.

ಕರೊನಾ ನಿಯಮ ಪಾಲನೆ: ರಾಯಚೂರು ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಕರೊನಾ ನಿಮಯಮ ಪಾಲಿಸಲಾಗಿದೆ. ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳನ್ನು ಶಿಕ್ಷಕರು ಮುಖ್ಯದ್ವಾರದ ಹತ್ತಿರ ಸ್ವಾಗತಿಸಿ, ಕೋವಿಡ್ ನಿಯಮಾವಳಿ ಪಾಲಿಸಲು ತಿಳಿಸಿದರು. ಜತೆಗೆ ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯಲು ಬಿಸಿ ನೀರು ಮತ್ತು ಸ್ಯಾನಿಟೈಜರ್ ವ್ಯವಸ್ಥೆಯನ್ನು ಮಾಡಿರುವುದು ಕಂಡು ಬರುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net