ರಾಯಚೂರು: ಶೇ.60.72ರಷ್ಟು ಮತದಾನ

07-05-Shiva-1
ರಾಯಚೂರು ತಾಲೂಕಿನ ತುಂಗಭದ್ರಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಮಂಗಳವಾರ ಮತದಾನಕ್ಕೆ ಸಾಲುಗಟ್ಟಿ ನಿಂತಿರುವ ಮಹಿಳೆಯರು.
Published on

ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಶೇ.60.72ರಷ್ಟು ಮತದಾನವಾಗಿದ್ದು, ಹಿಂದಿನ ಚುನಾವಣೆಗಳಿಗೆ ಹೋಲಿಸಿದಲ್ಲಿ ಈ ಬಾರಿ ಮತದಾನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.
2014ರ ಚುನಾವಣೆಯಲ್ಲಿ ಶೇ.58.32ರಷ್ಟು ಹಾಗೂ 2019ರ ಚುನಾವಣೆಯಲ್ಲಿ ಶೇ.58.34ರಷ್ಟು ಮತದಾನವಾಗಿದ್ದು, ಈ ಬಾರಿ ಮತದಾನ ಪ್ರಮಾಣ ಶೇ.60.72ಕ್ಕೆ ಏರಿಕೆ ಕಾಣುವ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮಗಳಿಗೆ ಸ್ಪಂದನೆ ದೊರೆತಂತಾಗಿದೆ.
ದೇವದುರ್ಗ ಕ್ಷೇತ್ರದಲ್ಲಿ ಶೇ.58.38, ಲಿಂಗಸುಗೂರು ಕ್ಷೇತ್ರದಲ್ಲಿ ಶೇ.57.98, ಮಾನ್ವಿ ಕ್ಷೇತ್ರದಲ್ಲಿ ಶೇ.58.28, ರಾಯಚೂರು ನಗರ ಕ್ಷೇತ್ರದಲ್ಲಿ ಶೇ.59.93, ರಾಯಚೂರು ಗ್ರಾಮೀಣದಲ್ಲಿ ಶೇ.65.21, ಶಹಾಪುರ ಕ್ಷೇತ್ರದಲ್ಲಿ ಶೇ.57.68, ಸುರಪುರ ಕ್ಷೇತ್ರದಲ್ಲಿ ಶೇ.66.72ರಷ್ಟು, ಯಾದಗಿರಿ ಕ್ಷೇತ್ರದಲ್ಲಿ ಶೇ.61.02ರಷ್ಟು ಮತದಾನವಾಗಿದೆ.
ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಸುರಪುರ ಕ್ಷೇತ್ರದಲ್ಲಿ ಅತ್ಯಕ ಶೇ.66.72ರಷ್ಟು ಮತದಾನವಾಗಿದ್ದರೆ, ಶಹಾಪುರ ಕ್ಷೇತ್ರದಲ್ಲಿ ಶೇ.57.68ರಷ್ಟು ಕಡಿಮೆ ಮತದಾನವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net