371 ಜೆ ಮೀಸಲಾತಿ ಕಾನೂನು ಜಾರಿಗೆ ಜ್ಯೋತಿ ಯಾತ್ರೆ: ಸೈಬಣ್ಣ ಜಮಾದಾರ

Jmadar
ಸೈಬಣ್ಣ ಜಮಾದಾರ
Published on

ರಾಯಚೂರು: ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನೀಡಲಾದ ವಿಶೇಷ ಕಾನೂನು 371 ಜೆ ಮೀಸಲಾತಿಯು ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ಕಲ್ಯಾಣ ಕರ್ನಾಟಕ 371 ಜೆ ಕಾನೂನು ತಿದ್ದುಪಡಿ ಹೋರಾಟ ಸಮಿತಿಯ ಅಧ್ಯಕ್ಷ ಸೈಬಣ್ಣ ಜಮಾದಾರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಕಕ ಭಾಗದ ಅಭಿವೃದ್ಧಿಗಾಗಿ ಜಾರಿಗೊಳಿಸಲಾದ ಮೀಸಲಾತಿ ಕಾನೂನು ಅಸರ್ಮಪಕವಾಗಿದ್ದು, 371 ಜೆ ಸಮರ್ಪಕ ಜಾರಿಗೆ ಆಗ್ರಹಿಸಿ ಕಲಬುರ್ಗಿಯಿಂದ ಬೆಂಗಳೂರಿನವರೆಗೂ ಕಕ ಭಾಗದ ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಜ್ಯೋತಿ ಯಾತ್ರೆ ನಡೆಯುತ್ತಿದ್ದು, ಆ.13ರಂದು ಕಲಬುರಗಿಯಲ್ಲಿ ಆರಂಭವಾದ ಜ್ಯೋತಿ ಯಾತ್ರೆ 29ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಮಾರೋಪಗೊಳ್ಳಲಿದೆ ಎಂದು ತಿಳಿಸಿದರು.

371 ಜೆ ಕಾನೂನು ಜಾರಿಯಾಗಿ ಹತ್ತು ವರ್ಷಗಳು ಕಳೆದಿದ್ದು, ಆದರೆ ಅದರ ಆಶಯಗಳು ಮಾತ್ರೆ ಈವರೆಗೂ ಈಡೇರಿಲ್ಲ. ಶಿಕ್ಷಣ, ಉದ್ಯೋಗ, ಅಭಿವೃದ್ಧಿ ಸೇರಿದಂತೆ ನೇಕ ವಿಚಾರಗಳಲ್ಲಿ ತಾರತಮ್ಯವನ್ನು ಈ ಭಾಗದ ಜನರು ಅನುಭವಿಸುವಂತಾಗಿದೆ ಎಂದರು. ಈ ಸಂದರ್ಭದಲ್ಲಿ ವಿಜಯಕುಮಾರ್, ಯಶವಂತರಾಜ್, ಸೂರ್ಯವಂಶಿ, ಶ್ರೀನಿವಾಸ, ದೇವರೆಡ್ಡಿ, ಮೂಕಪ್ಪ ಚೌಹಾಣ್, ಡಿಎಸ್ ಹಡಲಗಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net