

ರಾಯಬಾಗ: ಸರ್ಕಾರದಿಂದ ಅನುದಾನ ತಂದು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಇಲ್ಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾದ 5 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಸುಧಾರಣೆ ಹಾಗೂ 5 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಕೇಂದ್ರ ಶಾಲೆಯಲ್ಲಿ ಶೌಚಗೃಹ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಪಪಂ ಅಧ್ಯಕ್ಷ ಅಶೋಕ ಅಂಗಡಿ, ಅಧಿಕಾರಿಗಳಾದ ವಿಠ್ಠಲ ಚಂದರಗಿ, ಎಸ್.ಎಸ್.ಹೊಸಮನಿ, ಮುಖಂಡರಾದ ಸದಾಶಿವ ಘೋರ್ಪಡೆ, ದತ್ತ ಜಾಧವ್, ಮಹೇಶ ಕರಮಡಿ, ಶ್ರೀಧರ ಪಾಟೀಲ, ಭಾರತಿ ಲೋಹಾರ, ಎಚ್.ಎ.ಭಜಂತ್ರಿ, ವಿನೋದ ಹೊನಕುಪ್ಪೆ, ಅಣ್ಣಾಸಾಹೇಬ ಮುಗಳಖೋಡ, ರಿತೇಶ ಅವಳೆ, ಅನಿಲ ಕೊರವಿ, ಎಸ್.ಎಸ್.ಅಮರಶೆಟ್ಟಿ, ಮಲ್ಲೇಶ ದೊಡಮನಿ, ಕುಶಾಲ ಖೋತ, ಆರ್.ಟಿ.ಅರಬಹಳ್ಳಿ ಇತರರು ಇದ್ದರು.