

ಬೆಳಗಾವಿ: ಸರ್ಕಾರದಿಂದ ಸರಬರಾಜು ಮಾಡಲಾಗಿರುವ ಶಾಲಾ ಸಮವಸ, ಪಠ್ಯಪುಸ್ತಕ ಮೇ 29ರಂದು ನಡೆಯಲಿರುವ ಶಾಲಾ ಪ್ರಾರಂಭೋತ್ಸವದ ದಿನ ವಿತರಣೆ ಮಾಡಬೇಕು. ಪ್ರತಿ ನಾಲ್ಕನೇ ಶನಿವಾರ ಕಡ್ಡಾಯವಾಗಿ ಪಾಲಕರ ಸಭೆ ನಡೆಸಿ ಅವರ ಸಹಕಾರದಿಂದ ಮಕ್ಕಳ ದಾಖಲಾತಿ, ಹಾಜರಾತಿಯನ್ನು ಕಲಿಕೆಗೆ ಸಮನ್ವಯ ಮಾಡಿಕೊಳ್ಳಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ನಿರ್ದೇಶನ ನೀಡಿದರು.
ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ನಮ್ಮ ಶಾಲೆ&ನಮ್ಮ ಜವಾಬ್ದಾರಿ ಶಾಲಾ ಪ್ರಾರಂಭೋತ್ಸವ ಹಾಗೂ 2025&26ನೇ ಸಾಲಿನ ಶೈಣಿಕ ಗುಣಮಟ್ಟದ ಪ್ರಗತಿಗಾಗಿ ಶಿಣ ಇಲಾಖೆಯ ಮೇಲುಸ್ತುವಾರಿ ಅಧಿಕಾರಿಗಳ ಒಂದು ದಿನದ ಕಾರ್ಯಾಗಾರದ ಅಧ್ಯತೆ ವಹಿಸಿ ಅವರು ಮಾತನಾಡಿದರು.
ಗುಣಾತ್ಮಕ ಶಿಣಕ್ಕಾಗಿ 1ರಿಂದ 10ನೇ ತರಗತಿಯವರೆಗೆ ರ್ನಿದಿಷ್ಟ ಮತ್ತು ವಿಶಿಷ್ಟ ಯೋಜನೆ ರೂಪಿಸಬೇಕು. ಅದರಲ್ಲೂ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಆರಂಭದಿಂದಲೇ ವಿಶೇಷ ಚಟುವಟಿಕೆ ರೂಪಿಸಿ 5 ಹಾಗೂ 8ನೇ ತರಗತಿ ಮಕ್ಕಳಿಗೆ ಗ್ರಾಮ ಪಂಚಾಯತಿ ಹಂತದಲ್ಲಿನ ಗ್ರಂಥಾಲಯಗಳ ಬಳಕೆ ಮೂಲಕ ಶಿಣದ ಗುಣಮಟ್ಟ ತಿಳಿಯಲು ಯೋಜಿತ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.
ಎಲ್ಲ ಶೈಣಿಕ ಮೇಲುಸ್ತುವಾರಿ ಅಧಿಕಾರಿಗಳಿಗೆ ನಲಿಕಲಿ, 4 ರಿಂದ 7 ರವರೆಗಿನ ವಿದ್ಯಾರ್ಥಿಗಳಿಗೆ ಹಾಗೂ 8,9,10 ನೇ ತರಗತಿಯ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಣಕ್ಕೆ ಸಂಬಂಧಿಸಿದಂತೆ ಕ್ರಿಯಾಯೋಜನೆ ಪರಿಚಯಿಸಲಾಯಿತು. ಅಲ್ಲದೇ ಮುಂಬರುವ ದಿನಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನ, ದಾಖಲಾತಿ, ಹಾಜರಾತಿ, ಮೂಲ ಸೌಕರ್ಯಗಳ ಒದಗಿಸುವಿಕೆ, ಇನ್ಸ್ಪೆರ್, ಅವಾರ್ಡ್, ಕಂಪ್ಯೂಟರ್ ಶಿಣದ ಪರಿಚಯಾತ್ಮಕ ವಿವರಣೆ ನೀಡಲಾಯಿತು. ಕ್ರೀಡಾ ಸಾಮಗ್ರಿಗಳ ಸದ್ಬಳಕೆಯ ಕ್ರಿಯಾಯೋಜನೆ ಕೂಡ ಒದಗಿಸಲಾಯಿತು.
ಡಿಡಿಪಿಐ ಲೀಲಾವತಿ ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ ಮತ್ತಿತರರು ಇದ್ದರು. ಚಿಕ್ಕೋಡಿ ಉಪ ನಿರ್ದೇಶಕ ಸೀತಾರಾಮು ಆರ್.ಎಸ್. ವಂದಿಸಿದರು.