ಕಲಬುರಗಿಯಲ್ಲಿ ರಾಹುಲ್ ಗಾಂಧಿ ಭರ್ಜರಿ ಸ್ವಾಗತ: ಸಂಜೆ ಸಿಎಂ ಸಿದ್ದರಾಮಯ್ಯ ತೊಗರಿನಾಡಿನಲ್ಲಿ ಪ್ರಜಾಧ್ವನಿ ಯಾತ್ರೆಯಲ್ಲಿ ಸಿಎಂ ಭಾಗಿ

IMG-20240426-WA0026
Published on

ಅಜಯಸಿಂಗ್ ಪ್ರಿಯಾಂಕ್ ಖರ್ಗೆ ಗುತ್ತೇದಾರ ಅಲ್ಲಮಪ್ರಭು ಇತರರು ಹಾಜರಿದ್ದು ನಾಯಕನ ಬರ ಮಾಡಿಕೊಂಡರು

ಕಲಬುರಗಿ : ಲೋಕಸಭಾ ಚುನಾವಣೆಯ ಪ್ರಚಾರ ಪ್ರಯುಕ್ತ ಇಂದು ವಿಜಯಪುರ ಹಾಗೂ ಬಳ್ಳಾರಿಯಲ್ಲಿ ಜರುಗಲಿರುವ ಪ್ರಜಾ ಧ್ಚನಿ ಯಾತ್ರೆಯಲ್ಲಿ ಪಾಲ್ಗೊಳ್ಳು ಕಾಂಗ್ರೆಸ್ ನಾಯಕ ಸಂಸದ ರಾಹುಲ್‌ಗಾಂಧಿ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಅದರ ಬೆನ್ನಲ್ಲಿಯೇ ಮೈಸೂರಿನಿಂದ ವಿಶೇಷ ವಿಮಾನದಲ್ಲಿ ಸಿಎಂ ಸಿದ್ದರಾಮಯ್ಯ ಸಹ ಅಗಮಿಸಿದರು.
ಕೆಕೆಆರ್ ಡಿಬಿ ಅದ್ಯಕ್ಷ ಅಜಯಸಿಂಗ್, ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಇತರರು ಸ್ವಾಗತಿಸಿಕೊಂಡರು.

ಕೆಲ ಹೊತ್ತು ವಿಮಾನ ನಿಲ್ದಾಣದಲ್ಲಿ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿದರು. ಬಳಿಕ ಹೆಲಿಕಾಪ್ಟರ್ ದಲ್ಲಿ ವಿಜಯಪುರಕ್ಕೆ ತೆರಳಿದರು.

ಸಂಜೆ ೬ ಗಂಟೆಗೆ ಸಿದ್ದರಾಮಯ್ಯ ಅವರು ಮರಳಿ ಕಲಬುರಗಿ ನಗರಕ್ಕೆಆಗಮಿಸಿ ಪ್ರಜಾ ಧ್ವನಿ ಯಾತ್ರೆಯಲ್ಲಿ ಪಾಲ್ಗೊಳ್ಳುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net