ರಾಹುಲ್ ಗಾಂಧಿ ಭಾತೃತ್ವದ ನಾಯಕ

Rahul Gandhi is a fraternity leader
ವಿಜಯಪುರದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದಿಂದ ಭಾರತ ಜೋಡೋ ಯಾತ್ರೆ ವರ್ಷಾಚರಣೆ ಹಿನ್ನೆಲೆ ಬೃಹತ್ ರ‌್ಯಾಲಿ ನಡೆಯಿತು. ರಾಜು ಆಲಗೂರ, ಅಬ್ದುಲ್‌ಹಮೀದ ಮುಶ್ರೀಫ್, ಸುಭಾಸ ಛಾಯಾಗೋಳ ಮತ್ತಿತರರಿದ್ದಾರೆ.
Published on

ವಿಜಯಪುರ: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ‘ಭಾರತ ಜೋಡೋ ಯಾತ್ರೆ’ ವರ್ಷಾಚರಣೆ ಹಿನ್ನೆಲೆ ಕಾಂಗ್ರೆಸ್‌ನಿಂದ ಬೃಹತ್ ರ‌್ಯಾಲಿ ನಡೆಯಿತು.

ಗುರುವಾರ ನಗರದ ಮಹಾತ್ಮ ಗಾಂಧಿ ವೃತ್ತದಿಂದ ಜಗಜ್ಯೋತಿ ಬಸವೇಶ್ವರ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಕನಕದಾಸ ವೃತ್ತದವರೆಗೆ ರ‌್ಯಾಲಿ ನಡೆಯಿತು.

ನೇತೃತ್ವ ವಹಿಸಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ ಮಾತನಾಡಿ, ಕೋಮುವಾದ, ಮನುವಾದವನ್ನು ಅಳಿಸಿ ಸರ್ವಧರ್ಮ ಜನಾಂಗಗಳ ಮನಸ್ಸುಗಳನ್ನು ಒಂದು ಗೂಡಿಸುವುದು, ಭ್ರಾತೃತ್ವ ಬೆಳೆಸುವ ಉದ್ದೇಶದಿಂದ ರಾಹುಲ್ ಗಾಂಧಿ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತ ಜೋಡೋ ಯಾತ್ರೆ ಹಮ್ಮಿಕೊಂಡಿದ್ದರು.

ದೇಶದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂಥ ಈ ಯಾತ್ರೆಗೆ ಇಂದಿಗೆ ವರ್ಷ ಪೂರ್ಣಗೊಂಡಿದೆ. ತನ್ನಿಮಿತ್ತ ಈ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಮುಖಂಡ ಅಬ್ದುಲ್‌ಹಮೀದ ಮುಶ್ರೀಫ್, ಉಪಾಧ್ಯಕ್ಷರಾದ ಸುಭಾಸ ಛಾಯಾಗೋಳ, ಮಹ್ಮದ ರಫೀಕ ಟಪಾಲ, ಅಬ್ದುಲ್‌ರಜಾಕ ಹೊರ್ತಿ, ರಮೇಶ ಗುಬ್ಬೇವಾಡ, ಆಜಾದ ಪಟೇಲ, ಮಹಾದೇವಿ ಗೋಕಾಕ, ಜಮೀರಅಹ್ಮದ ಬಕ್ಷಿ, ಸಾಹೇಬಗೌಡ ಬಿರಾದಾರ, ರಾಕೇಶ ಕಲ್ಲೂರ, ಡಾ.ಪ್ರಭುಗೌಡ ಪಾಟೀಲ, ಚಾಂದಸಾಬ ಗಡಗಲಾವ, ಡಾ.ಗಂಗಾಧರ ಸಂಬಣ್ಣಿ, ಇಲಿಯಾಸ ಬೋರಾಮಣಿ, ಅಫ್ಜಲ್ ಜಾನವೆಕರ, ವಿಶ್ವನಾಥ ಮಠ, ಆರತಿ ಶಹಾಪೂರ, ಬಾಳನಗೌಡ ಪಾಟೀಲ, ಶಹಾಜಾನ್ ಮುಲ್ಲಾ, ಜಾವೀದ ಮೋಮಿನ್, ಸಿದ್ದನಗೌಡ ಗೌಡನ್ನವರ, ಸುರೇಶ ಹಾರಿವಾಳ, ರಫೀಕ ಪಕಾಲೆ ಸಾಹೇಬಗೌಡ ಬಿರಾದಾರ (ತದ್ದೇವಾಡಿ) ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net