ರಾಹುಲ್ ಗಾಂಧಿಗೆ ಎಲ್‌ಕೆಜಿ ಮಕ್ಕಳಿಗಿಂತ ಜ್ಞಾನ ಕಡಿಮೆ: ಕೆ.ಎಸ್.ಈಶ್ವರಪ್ಪ

EX DCM K S Eshwarappa
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
Published on

ಶಿವಮೊಗ್ಗ: ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರಿಗೆ ಎಲ್ಕೆಜಿ ಮಕ್ಕಳಿಗಿಂತ ಜ್ಞಾನ ಕಡಿಮೆ ಇದೆ. ಹಾಗಾಗಿ ಪದೇಪದೆ ಬಾಲಿಶ ಹೇಳಿಕೆಗಳನ್ನು ನೀಡುತ್ತಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.

ಮಹಾವೀರ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಎಷ್ಟು ಬೈದರೂ ಮಾನ ಮರ್ಯಾದೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಒಬಿಸಿಗೆ ಸೇರಿದವರಲ್ಲ ಎಂಬ ಹೇಳಿಕೆ ನೀಡಿದ ರಾಹುಲ್ ಗಾಂಧಿ ಜ್ಞಾನವನ್ನು ಪ್ರಶ್ನಿಸುವಂತಾಗಿದ್ದು, ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿಎಂ ಸಿದ್ದರಾಮಯ್ಯ ಸರಿಯಾಗಿ ಬುದ್ಧಿ ಹೇಳಬೇಕಿದೆ ಎಂದರು.
ಇಲ್ಲಿವರೆಗೆ ಯಾರೊಬ್ಬರೂ ಮೋದಿಯ ಜಾತಿ ನೋಡಲಿಲ್ಲ. ಅವರೊಬ್ಬ ವಿಶ್ವ ನಾಯಕರಾಗಿದ್ದು ಮೋದಿ ಹಿಂದುಳಿದವರು ಮತ್ತು ದಲಿತರಿಗೆ ಏನೆಲ್ಲ ಅವಕಾಶ ಕೊಟ್ಟಿದ್ದಾರೆಂಬುದು ಎಲ್ಲರಿಗೂ ಗೊತ್ತಿದೆ. ಸ್ವಾತಂತ್ರೃ ಬಂದಾಗಿನಿಂದ 28 ಒಬಿಸಿ ಮತ್ತು 10 ಎಸ್ಸಿ, ಎಸ್ಟಿ ಸಮಾಜದವರನ್ನು ಮಂತ್ರಿ ಮಾಡಿರುವುದು ಇದೇ ಮೊದಲು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net