ರಾಹುಲ್ ಗಾಂಧಿ ಯುವ ಜನರು ಮತ್ತು ಸೈನಿಕರಿಗೆ ಅಪಮಾನ ಮಾಡಿದ್ದಾರೆ

rahul gandhi
Published on

ಮೈಸೂರು: ಅಗ್ನಿವೀರ್ ಯೋಜನೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ರಾಹುಲ್ ಗಾಂಧಿ ಯುವ ಜನರು ಮತ್ತು ಸೈನಿಕರಿಗೆ ಅಪಮಾನ ಮಾಡಿದ್ದಾರೆ. ಕೂಡಲೇ ಅವರು ದೇಶದ ಜನರಲ್ಲಿ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಪೂರ್ವ ಸೈನಿಕ ಪ್ರಕೋಷ್ಠ ರಾಜ್ಯ ಸಮಿತಿ ಸದಸ್ಯ ಸಿದ್ದರಾಮು ಆಗ್ರಹಿಸಿದರು.

ದೇಶದ ಯುವ ಸಮೂಹದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆ ಜಾರಿಗೆ ತಂದಿತು. ಇದರಲ್ಲಿ ನಾಲ್ಕು ವರ್ಷದ ಅವಧಿಗೆ ಯುವಕರನ್ನು ಅಗ್ನಿ ವೀರರನ್ನಾಗಿ ಸೇನೆಗೆ ನೇಮಕ ಮಾಡಿಕೊಂಡು ಪ್ರತಿ 25ರಿಂದ 45 ಸಾವಿರದ ವರೆಗೆ ಹಂತ ಹಂತವಾಗಿ ವೇತನ ನೀಡುವುದು ಮತ್ತು ಸೇವೆ ಪೂರ್ಣಗೊಂಡ ಬಳಿಕ 14 ಲಕ್ಷ ರೂ. ಹಣ ನೀಡಲಾಗುತ್ತದೆ. ಇದರ ಬಗ್ಗೆ ಸರಿಯಾಗಿ ತಿಳಿಯದೇ ಸೈನಿಕರನ್ನು ಅಪಮಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಮಾಡುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಈ ಯೋಜನೆಯಿಂದ ಆಯ್ಕೆಯಾದ ಅಗ್ನಿ ವೀರರು 4 ವರ್ಷದ ಸೇವೆ ಮುಗಿದ ಬಳಿಕ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕೆಲಸಕ್ಕೆ ಸೇರಲು ಸೈನಿಕ ಮೀಸಲಾತಿ ಪಡೆಯಬಹುದಾಗಿದೆ. ಅಲ್ಲದೇ ಸೇನಾ ನೇಮಕಾತಿಯಲ್ಲೂ ಅರ್ಹತೆ ಪಡೆದುಕೊಂಡು ಸೈನ್ಯ ಸೇರಬಹುದಾಗಿದೆ. ಈ ಯೋಜನೆ 17ರಿಂದ 24 ವರ್ಷದವರಿಗೆ ಅನುಕೂಲವಾಗುವುದರಿಂದ ಯುವ ಸಮೂಹಕ್ಕೆ ದೇಶ ಭಕ್ತಿ, ಶಿಸ್ತು ಬೆಳೆಸಲು ಅನುಕೂಲವಾಗಲಿದೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net