

ಧಾರವಾಡ: ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಎನ್. ಸ್ಪಽðಸಿದ್ದಾರೆ. ಆದರೆ, ಇವರು ಕಾಂಗ್ರೆಸ್‌ನ ರಾಹುಲ್ ಗಾಂಧಿ ಅಲ್ಲ, ಬೆಂಗಳೂರಿನ ರಾಜಾಜಿನಗರ ನಿವಾಸಿ.
ಇವರ ಪೂರ್ಣ ಹೆಸರು ರಾಹುಲ್ ಗಾಂಧಿ ಎನ್. ಧಾರವಾಡ ಲೋಕಸಭೆ ಕ್ಷೇತ್ರ ಆಯ್ಕೆ ಮಾಡಿಕೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸ್ಪಽðಸಿದ್ದಾರೆ. ಕೊನೆಯ ದಿನವಾದ ಶುಕ್ರವಾರ ಚುನಾವಣಾಽಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ. 57 ವರ್ಷದ ರಾಹುಲ್ ಗಾಂಧಿ, ಪಿಯುಸಿ ಓದಿದ್ದಾರೆ. ಸ್ವಂತ ಉದ್ಯೋಗಿಯಾಗಿರುವ ಇವರ ಬಳಿ ೩೫.೩೫ ಲಕ್ಷ ರೂಪಾಯಿ ಮೌಲ್ಯದ ಚರಾಸ್ತಿ ಇದ್ದು, ಯಾವುದೇ ಸ್ಥಿರಾಸ್ತಿ ಇಲ್ಲ.
ಕಣದಲ್ಲಿ ವೆಂಕಟೇಶ ಪ್ರಸಾದ್!
ವೆಂಕಟೇಶ ಪ್ರಸಾದ್ ಕೂಡ ಧಾರವಾಡ ಕ್ಷೇತ್ರದಲ್ಲಿದ್ದಾರೆ. ಇವರು ಕ್ರಿಕೆಟರ್ ಅಲ್ಲ. ಬದಲಾಗಿ ಮೈಸೂರಿನ ಟೂರಿಸ್ಟ್ ಗೈಡ್ ವೆಂಕಟೇಶ ಪ್ರಸಾದ್ ಎಚ್. ಇವರು ಇಂಡಿಯನ್ ಲೇಬರ್ (ಅಂಬೇಡ್ಕರ್, ಫುಲೆ) ಪಕ್ಷದಿಂದ ಧಾರವಾಡ ಕ್ಷೇತ್ರಕ್ಕೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ೪೫ ವರ್ಷದ ಇವರ ಹೆಸರಲ್ಲಿ ಚರಾಸ್ತಿ, ಸ್ಥಿರಾಸ್ತಿ ಯಾವುದೂ ಇಲ್ಲ. ಸಾಲವೂ ಇಲ್ಲ. ಬಿಹಾರದ ಗಯಾ ವಿಶ್ವವಿದ್ಯಾಲಯದಿಂದ ಬಿಎಸ್.ಸಿ ಪದವೀಧರರಾಗಿದ್ದಾರೆ.