ರಾಹುಲ್ ಗಾಂಧಿಗೆ ಕೊಡವ ಸಾಂಪ್ರದಾಯಿಕ ಆಭರಣ ಪೀಚೆಕತ್ತಿ ಉಡುಗೊರೆ

13mdka4 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಭಾರತ್ ಜೋಡೋ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕೆಪಿಸಿಸಿ ವಕ್ತಾರ ಎ.ಎಸ್. ಪೊನ್ನಣ್ಣ
ಕೊಡವ ಸಾಂಪ್ರದಾಯಿಕ ಆಭರಣ ಉಡುಗೊರೆಯಾಗಿ ನೀಡಿದರು.

ನಿವೃತ್ತ ಸೇನಾಧಿಕಾರಿಗಳೊಂದಿಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ತನ್ನಿಕೆರೆ ಕ್ಯಾಂಪ್‌ನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಯೂ ಆಗಿರುವ ರಾಹುಲ್ ಗಾಂಧಿ ಅವರೊಂದಿಗೆ ೧೫ ನಿಮಿಷ ಸಮಲೋಚನೆ ನಡೆಸಿದರು. ಪೀಚೆಕತ್ತಿಯನ್ನು ಬಹಳ ಕುತೂಹಲದಿಂದ ವೀಕ್ಷಿಸಿದ ರಾಹುಲ್ ಗಾಂಧಿ, ಬಹಳ ಚನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಮಾಜಿ ಸೈನಿಕರಿಗೆ ಸಿಗಬೇಕಾದ ಭೂ ಮಂಜೂರಾತಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ನಿವೃತ್ತ ಸೇನಾಧಿಕಾರಿಗಳು ಗಮನ ಸೆಳೆದರು. ಮೃತಪಟ್ಟ ಸೈನಿಕರ ಪತ್ನಿಗೆ ಪಿಂಚಣಿ ನೀಡುವಲ್ಲಿ ಆಗಬೇಕಾದ ಕ್ರಮಗಳ ಬಗ್ಗೆಯೂ ಗಮನ ಸೆಳೆಯಲಾಯಿತು. ಕೊಡಗು ದೇಶಕ್ಕೆ ಹಲವಾರು ಸೈನಿಕರನ್ನು ಕೊಟ್ಟ ಪ್ರದೇಶ. ಸೈನ್ಯಕ್ಕೆ ನಡೆಯುವ ಆಯ್ಕೆ ಪ್ರಕ್ರಿಯೆ ಕೊಡಗಿನಲ್ಲಿ ನಡೆಸುವ ಅಗತ್ಯತೆ ಬಗ್ಗೆ ಮನವರಿಕೆ ಮಾಡಿಕೊಡ ಲಾಯಿತು.

ಹಲವಾರು ಅಂತಾರಾಷ್ಟ್ರೀಯ ಹಾಕಿ ಆಟಗಾರರನ್ನು ಕೊಡುಗೆಯಾಗಿ ಕೊಟ್ಟ ಕೊಡಗಿನಲ್ಲಿ ಸುಸಜ್ಜಿತ ಹಾಕಿ ಕ್ರೀಡಾಂಗಣದ ಅವಶ್ಯಕತೆ ಇರುವ ಬಗ್ಗೆ ತಿಳಿಸಲಾಯಿತು. ಕೊಡಗಿನ ಬಗ್ಗೆ ನನಗೆ ಗೊತ್ತಿದೆ. ದೇಶ ಸೇವೆಗಾಗಿ ಅಪಾರ ಸಂಖ್ಯೆಯಲ್ಲಿ ಸೈನಿಕರನ್ನು ನೀಡಿರುವ ಹಾಗೂ ದೇಶಕ್ಕಾಗಿ ಜೀವ ಬಲಿದಾನ ಮಾಡಿರುವುದು ಶ್ಲಾಘನೀಯ ಎಂದು ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತ ಪಡಿಸಿದರು.

ಇಂದಿರಾಗಾಂಧಿ ಕೊಡಗಿಗೆ ಭೇಟಿ ನೀಡಿದ್ದ ವಿಷಯ ಗಮನ ಸೆಳೆದ ಎ.ಎಸ್. ಪೊನ್ನಣ್ಣ ನೀವು ಕೊಡಗಿಗೆ ಬರಬೇಕಾಗಿತ್ತೆಂದು ಆಹ್ವಾನ ನೀಡಿ ದರು. ನಿವೃತ್ತ ಸೇನಾಧಿಕಾರಿಗಳಾದ ಮೇಜರ್ ಜನರಲ್ ಅರ್ಜುನ್ ಮುತ್ತಣ್ಣ, ಬ್ರಿಗೇಡಿಯರ್ ಪಿ.ಡಿ. ಮೊಣ್ಣಪ್ಪ, ಕಮಾಂಡರ್ ಜಿ.ಜೆ. ಸಿಂಗ್, ಮೇಜರ್ ಸಿ.ಯು. ಮೊಣ್ಣಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net