ರಾಗಿ ಮೆದೆ ಬೆಂಕಿಗಾಹುತಿ

10blrp8
Published on

ಹಾಸನ: ಜಮೀನಿನಲ್ಲಿ ಕಟಾವು ಮಾಡಿ ಬಡಿಯುವುದಕ್ಕಾಗಿ ಹಗರೆ ಗ್ರಾಮದಲ್ಲಿ ಮೆದೆ(ರಾಶಿ) ಹಾಕಿದ್ದ ರಾಗಿ ಬೆಳೆ ಶನಿವಾರ ಕಾಳ್ಗಿಚ್ಚಿಗೆ ಸಿಲುಕಿ ಸುಟ್ಟು ಹೋಗಿದೆ.

ಬೇಲೂರು ತಾಲೂಕಿನ ಮಾದಿಹಳ್ಳಿ ಹೋಬಳಿಯ ಹಳೇ ಹಗರೆ ಗ್ರಾಮದ ವಸಂತಮ್ಮ ಎಂಬುವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಮಳೆ ಕೊರತೆಯ ನಡುವೆಯೂ ಉತ್ತಮ ರಾಗಿ ಬೆಳೆದಿದ್ದರು. ನಂತರ ರಾಗಿ ಬೆಳೆಯನ್ನು ಕಟಾವು ಮಾಡಿ ಜಮೀನಿನ ಹತ್ತಿರವೇ ಮೆದೆ(ರಾಶಿ)ಹಾಕಿದ್ದರು. ಒಕ್ಕಲಾಟ ಮಾಡಿಸಲು ಸಿದ್ಧತೆ ನಡೆಸಿದ್ದರು. ಅಷ್ಟರಲ್ಲಾಗಲೇ ಶನಿವಾರ ಮಧ್ಯಾಹ್ನ ಬಯಲು ಪ್ರದೇಶದಿಂದ ಹೊತ್ತಿಕೊಂಡು ಬಂದ ಬೆಂಕಿ ರಾಗಿ ಹೊಲವನ್ನು ಆವರಿಸಿದ್ದು, ಹುಲ್ಲು ಸಮೇತ ರಾಗಿ ಸಂಪೂರ್ಣ ಸುಟ್ಟುಹೋಗಿದೆ. ಬೆಳೆ ಕಳೆದುಕೊಂಡ ವಸಂತಮ್ಮ ಅವರ ಆಕ್ರಂದನ ಮುಗಿಲುಮುಟ್ಟಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net