ಮಲಿಯಮ್ಮದೇವಿಯ ಜಾತ್ರೆ ಅದ್ದೂರಿ

600400
Published on

ಅಳವಂಡಿ; ಸಮೀಪದ ರಘುನಾಥನಹಳ್ಳಿಯ ಆರಾಧ್ಯ ದೇವತೆ ಶ್ರೀಮಲಿಯಮ್ಮದೇವಿಯ ಜಾತ್ರೆ ಅಂಗವಾಗಿ ಬುಧವಾರ ದೇವಿಯ ಮೂರ್ತಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಿತು.

ದೇವಸ್ಥಾನವನ್ನು ವಿದ್ಯುತ್ ದೀಪ ಹಾಗೂ ತಳಿರು, ತೋರಣ ಹಾಗೂ ಹೂಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ ಮಲಿಯಮ್ಮದೇವಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸಲಾಯಿತು. ನಂತರ ಶ್ರೀದೇವಿಯ ಅಡ್ಡಪಲ್ಲಕ್ಕಿ, ಕಳಸ ಹಾಗೂ ಸಕಲ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮರಳಿ ದೇವಸ್ಥಾನಕ್ಕೆ ತಲುಪಿತು. ನಂತರ ಭಕ್ತರು ದೇವಿಗೆ ಉಡಿ ತುಂಬಿ ಭಕ್ತಿ ಹರಕೆ ಸಲ್ಲಿಸಿದರು. ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಪ್ರಮುಖರಾದ ಅಂಬರೀಷ ಬೋಚನಹಳ್ಳಿ, ರಾಜು ಕಮತರ, ತಿಪ್ಪಣ್ಣ, ಶರಣಪ್ಪ, ನಾಗರಾಜ, ಯಮುನಪ್ಪ, ಯಲ್ಲಪ್ಪ, ಮಂಜು, ರವಿ, ಮುತ್ತಿರಾಜ, ರಮೇಶ, ಹನುಮಂತ, ಮಲ್ಲಪ್ಪ, ವೆಂಕಟೇಶ, ಬಸವರಾಜ, ಮೈಲಾರಪ್ಪ, ಲಕ್ಷ್ಮಪ್ಪ, ವಿರುಪಾಕ್ಷಪ್ಪ, ಮಾರುತಿ, ಪರಸಪ್ಪ, ಮಹಾಂತೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net