

ಹುಣಸೂರು: ಬೆಂಗಳೂರಿನ ಸಿನಿ ಕ್ರಿಯೇಶನ್ ಸಂಸ್ಥೆಯಿಂದ ಕೊಡಮಾಡುವ 2024-25ನೇ ಸಾಲಿನ ಅತ್ಯುತ್ತಮ ಛಾಯಾಗ್ರಾಹಕ(ಬಿಸಿಸಿ ಐಕಾನಿಕ್ ಪ್ರಶಸ್ತಿ)ಪ್ರಶಸ್ತಿಗೆ ಹುಣಸೂರಿನ ಛಾಯಾಗ್ರಾಹಕ ರಘು ಭಾಜನರಾಗಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಏ 9 ಈವೆಂಟ್ಸ್‌ನಲ್ಲಿ ಆಯೋಜಿಸಿದ್ದ ಸಿನಿ ಕ್ರಿಯೇಶನ್‌ನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆ ಸಂಸ್ಥಾಪಕ ಸದ್ದು ಪ್ರಶಸ್ತಿ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಮಾಸ್ಟರ್ ಮೋಟಿವೇಶನ್ ಸ್ಪೀಕರ್ ಸುಹಾಸ್ ಗೋಪಾಲ್, ಕ್ಯಾನನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಕರ್ನಾಟಕ ವಿಭಾಗದ ಮಾರಾಟ ಮ್ಯಾನೇಜರ್ ಬಾಲುಂಕೇಶ್ವರ, ಜೆನಾ ಪ್ರೋಡಕ್ಟ್ ತಾಂತ್ರಿಕ ತರಬೇತುದಾರ ರಘುಗೌಡ, ಕರ್ನಾಟಕ ಛಾಯಾಗ್ರಾಹಕರ ಸಂಘದ ನಿರ್ದೇಶಕ ಪರಮೇಶ್, ಕನ್ನಡ ನಟ ಯಶವಂತ್ ಕುಮಾರ್ ಮತ್ತು ಕನ್ನಡ ಚಲನಚಿತ್ರ ನಿರ್ದೇಶಕ ಸಚ್ಚಿನ್ ಶೆಟ್ಟಿ ಭಾಗವಹಿಸಿದ್ದರು.