ರಾಘವೇಂದ್ರಸ್ವಾಮಿ ಮಠದಲ್ಲಿ ಚೊಕ್ಕೊತ್ಸವ

17 SND 03
ಸಿಂಧನೂರು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಕಾರ್ತಿಕೋತ್ಸವ ನಿಮಿತ್ತ ಚೊಕ್ಕೋತ್ಸವದಲ್ಲಿ ಮಹಿಳೆಯರು ದೀಪ ಪ್ರಜ್ವಲನ ಮಾಡಿದರು.
Published on

ಸಿಂಧನೂರು: ನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಕಾರ್ತಿಕ ದೀಪೋತ್ಸವದ ನಿಮಿತ್ಯ ಚೊಕ್ಕೊತ್ಸವ ಕಾರ್ಯಕ್ರಮ ಶುಕ್ರವಾರ ಅದ್ದೂರಿಯಾಗಿ ಜರುಗಿತು.

ರಾಯರ ಮಠದ ವಿಚಾರಣ ಕರ್ತ ರಾಘವೇಂದ್ರ ರಾವ್ ಕುಲಕರ್ಣಿ ಮಾತನಾಡಿ, ಪ್ರತಿ ವಷರ್ ಕಾರ್ತಿಕ ಮಾಸದ ಪೌರ್ಣಮಿಯಂದು ಗುರುರಾಯರಿಗೆ ದೃಷ್ಟಿ ತಗೆಯಲಾಗುತ್ತದೆ. ಮಂತ್ರಾಲಯದ ಸುಬುಧೇಂದ್ರ ತೀರ್ಥರ ಅಜ್ಞಾನುಸಾರ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇದೊಂದು ವಿಶಿಷ್ಟ ಪೂರ್ಣ ಕಾರ್ಯಕ್ರಮವಾಗಿದೆ. ರಾಯರ ಬೃಂದಾವನ ಎದುರಿನ ಆವರಣದಲ್ಲಿ ಎಣ್ಣೆಯಲ್ಲಿ ಅದ್ದಿದ ಮಡಿ ಮಾಡಿದ ಬಿಳಿ ವಸ್ತ್ರಕ್ಕೆ ಧಾರ್ಮಿಕ ವಿಧಿ ವಿಧಾನಗಳಿಗನುಗುಣವಾಗಿ, ಮಂತ್ರಪೂರ್ವಕ ಅಗ್ನಿಸ್ಪರ್ಶ ಮಾಡಿ ಚೊಕ್ಕೋತ್ಸವವನ್ನು ಆಚರಿಸಲಾಗುತ್ತದೆ ಎಂದರು.

ರಾಮಕೃಷ್ಣ ಆಚಾರ್ ಗೋನವಾರ್ ನೇತೃತ್ವದಲ್ಲಿ ಭಜನೆ ನಡೆಯಿತು. ಗಾಯಕ ಕೃಷ್ಣಮಲಕಸಮುದ್ರ ಸುಶ್ರಾವ್ಯವಾಗಿ ಹಾಡಿದರು. ನೂರಾರು ಮಹಿಳೆಯರು ಕಾರ್ತಿಕ ದೀಪೋತ್ಸವದಲ್ಲಿ ಪಾಲ್ಗೊಂಡು, ಶ್ರದ್ಧಾ ಭಕ್ತಿಯಿಂದ ವಿವಿಧೆಡೆ ದೀಪಗಳನ್ನು ಹಚ್ಚಿ ಭಕ್ತಿ ಸಮರ್ಪಿಸಿದರು. ಮಠದ ಅರ್ಚಕ ನವೀನ ಆಚಾರ್ ಸುಬ್ಬಣ್ಣಾಚಾರ್, ಮುಖಂಡರಾದ ಎಂ.ಕೆ. ಗೌರಕರ, ಮನೋಹರ್‌ರಾವ್ ಕುಲಕರ್ಣಿ, ಗುರುರಾಜ ಅಲ್ದಾಳ, ಗೋಪಾಲ ಆಚಾರ್ ಜೋಶಿ, ಡಾ. ವಿಜಯಕುಮಾರ ಜೋಶಿ ವೆಂಕಟೇಶ ಆಚಾರ ಕೆಂಗಲ್, ವೆಂಕಟರಾವ್ ಚನ್ನಳ್ಳಿ, ಆಡವಿರಾವ್ ಸಿದ್ದರಾಂಪುರ, ವೆಂಕಟೇಶ ಸಿದ್ದರಾಂಪುರ, ಮೂರ್ತಿ ಪ್ರಾಣೇಶ ಆಚಾರ, ಜಯತೀರ್ಥದಾಸ, ಅಜಯ ಕಾನಿಹಾಳ, ವಾದಿರಾಜ, ಸುಧಾಬಾಯಿ ಜೋಶಿ, ಸುಧಾಬಾಯಿ ಗೌರ್ಕರ್, ಅರ್ಚನಾ ಕಾನಿಹಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net