ಶ್ರೀ ರಾಘವೇಂದ್ರ ಸ್ವಾಮಿ ರಥೋತ್ಸವ

mkg
Published on

ಚನ್ನಗಿರಿ: ಪಟ್ಟಣದ ಅಗ್ರಹಾರದ ಶ್ರೀ ರಾಘವೇಂದ್ರಸ್ವಾಮಿ ರಥೋತ್ಸವವು ಭಕ್ತರ ಸಮ್ಮುಖದಲ್ಲಿ ಶನಿವಾರ ಅದ್ಧೂರಿಯಾಗಿ ಜರುಗಿತು. ರಥೋತ್ಸವದ ನಿಮಿತ್ತ ವಿಶೇಷ ಪೂಜೆಗಳು ನಡೆದವು.

ಪಟ್ಟಣದ ರಾಜಬೀದಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ರಾಯರ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ದೇವರಿಗೆ ಹೂಗಳಿಂದ ಅಲಂಕರಿಸಿ ಪೂಜೆ ನೆರವೇರಿಸಲಾಯಿತು. ದೇವರಿಗೆ ಅಭಿಷೇಕ, ಪುಣ್ಯಾಹ, ಅಂಕುರದರ್ಪಣ, ಅಷ್ಟವದನ ಸೇವೆ, ರಕ್ಷಾಬಂಧನ ಹಾಗೂ ಪಲ್ಲಕ್ಕಿ ಉತ್ಸವ ನಡೆಸಲಾಯಿತು.

ದೇವರ ಕಳಸ ಸ್ಥಾಪನೆ, ಧ್ವಜಾರೋಹಣ, ನವಗ್ರಹ ಸ್ಥಾಪನೆ, ಗಜೇಂದ್ರೋತ್ಸವ ಕಾರ್ಯಕ್ರಮ ನಡೆಸಲಾಯಿತು. ರಥದ ಪೂಜೆ, ರಥಾಂಗಹೋಮ, ಬಲಿದಾನ ಹಾಗೂ ಮಧ್ಯಾಹ್ನ 1 ಗಂಟೆಗೆ ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಸಲಾಯಿತು.

ರಥೋತ್ಸವದಲ್ಲಿ ರಾಘವೇಂದ್ರ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಪಿ.ಎನ್. ಕೃಷ್ಣ ಉಪಾಧ್ಯ, ಸಿ.ಜಿ. ವೆಂಕಟೇಶ್, ಎ.ಎನ್. ಗುರುಪ್ರಸಾದ್, ಸಿ.ವಿ. ಸುಮತೀಂದ್ರ, ಪುರಸಭೆ ಸದಸ್ಯ ಪಟ್ಲಿ ನಾಗರಾಜ್, ಮಾಜಿ ಸದಸ್ಯ ಕರಡೇರ ರಾಜಣ್ಣ, ಮಾಡಾಳು ರಾಜಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net