ಪುತ್ತಿಗೆಯಲ್ಲಿ ರಾಘವೇಂದ್ರ ಸ್ವಾಮಿ ವೃಂದಾವನ ಪ್ರತಿಷ್ಠಾಪನೆ

New Project (21)
Published on

ಮೂಡುಬಿದಿರೆ: ಪುತ್ತಿಗೆ ಗ್ರಾಮದ ಸಂಪಿಗೆ ಚಿಟ್ಟೆಮಾರ್‌ನಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿ ನೂತನ ಮಂದಿರದಲ್ಲಿ ವೃಂದಾವನ ಪ್ರತಿಷ್ಠಾಪನಾ ಮಹೋತ್ಸವ, ಅಷ್ಟೋತ್ತರ ಶತಕಲಶ ಸಹಿತ ಬ್ರಹ್ಮಕಲಶಾಭಿಷೇಕ ಗುರುವಾರ ನಡೆಯಿತು.

ಉಡುಪಿ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನೂತನ ಶಿಲಾಮಯ ಮಂದಿರದಲ್ಲಿ ರಾಯರ ವೃಂದಾವನ ಪ್ರತಿಷ್ಠಾಪನೆ ಮಾಡಿದರು. ಕುಡುಪು ಕೃಷ್ಣರಾಜ ತಂತ್ರಿ ನೇತೃತ್ವದಲ್ಲಿ ಅಷ್ಟೋತ್ತರ ಶತಕಲಶ ಸಹಿತ ಬ್ರಹ್ಮಕಲಶಾಭಿಷೇಕ ನೆರವೇರಿಸಲಾಯಿತು. ವಾಮಂಜೂರು ಹರಿ ಉಪಾಧ್ಯಾಯ ಪೌರೋಹಿತ್ಯದಲ್ಲಿ ನಾಲ್ಕು ದಿನ ಹೋಮ-ಹವನ ಸಂಪನ್ನಗೊಂಡಿತು.

ಅಮೇರಿಕದ ಉದ್ಯಮಿ, ದೇವಳದ ಸ್ಥಾಪಕ ಕಿಶೋರ್ ಕುಮಾರ್ ಕೋಟ್ಯಾನ್, ಭಾರತಿ ಕೋಟ್ಯಾನ್, ಪುಷ್ಪಾ ಲೋಕಯ್ಯ ಕೋಟ್ಯಾನ್, ಅರ್ಯನ್ ಕಿಶೋರ್ ಕೋಟ್ಯಾನ್, ತ್ರಿಷಾ ಕಿಶೋರ್ ಕೋಟ್ಯಾನ್, ಪ್ರಧಾನ ಅರ್ಚಕ ಜನಾರ್ದನ ಭಟ್ ಪುತ್ತಿಗೆ, ಗೌರವ ಮಾರ್ಗದರ್ಶಕ ಎಸ್.ಪ್ರದೀಪ್ ಕುಮಾರ ಕಲ್ಕೂರ, ಟ್ರಸ್ಟಿಗಳಾದ ಪ್ರವೀಣ್ ಎಲ್.ಕೋಟ್ಯಾನ್, ರೇಖಾ ರಾಜೇಂದ್ರ ಸಾಲ್ಯಾನ್, ನವೀನ್‌ಚಂದ್ರ ಎಲ್.ಹೆಗ್ಡೆ, ಡಾ.ಪ್ರಕಾಶ್ ಮೂಡುಬಿದಿರೆ, ಲೀಲಾಕ್ಷ ಬಿ.ಕರ್ಕೇರ, ಮಾರ್ಗದರ್ಶಕರಾದ ಕೆ.ಶ್ರೀಪತಿ ಭಟ್, ಡಾ.ನವನೀತ ಶೆಟ್ಟಿ ಕದ್ರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net