ಕೆ.ಆರ್.ಸಾಗರದಲ್ಲಿ ಶ್ರೀರಾಘವೇಂದ್ರಸ್ವಾಮಿಗಳ 354ನೇ ಮಧ್ಯಾರಾಧನೆ

11-08-25--krs1 (1)
ಕೃಷ್ಣರಾಜಸಾಗರ ರೈಲ್ವೇ ನಿಲ್ದಾಣ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಮಠದಲ್ಲಿ 354ನೇ ಮಧ್ಯಾರಾಧನೆ ಅಂಗವಾಗಿ ಪಾದುಕೆ ಪೂಜೆ ನೆರವೇರಿತು.
Published on

ಕೆ.ಆರ್.ಸಾಗರ: ಕೃಷ್ಣರಾಜಸಾಗರ ರೈಲ್ವೇ ನಿಲ್ದಾಣ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಮಠದಲ್ಲಿ 354ನೇ ಆರಾಧನಾ ಮಹೋತ್ಸವದ ಅಂಗವಾಗಿ ಸೋಮವಾರ ಮಧ್ಯಾರಾಧನಾ ಕಾರ್ಯಕ್ರಮಗಳು ನೆರವೇರಿದವು.

ಮುಖ್ಯ ಅರ್ಚಕರಾದ ಶ್ರೀ ಹಾವೇರಿ ರಾಘವೇಂದ್ರ ಚಾರ್ಯ ನೇತೃತ್ವದಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳ ಪ್ರತಿಮೆಗೆ ಬೆಳಗ್ಗೆಯಿಂದ ಸುಪ್ರಭಾತ, ವೇದ ಪಾರಾಯಣ, ನಿರ್ಮಾಲ್ಯ ವಿಸರ್ಜನೆ ಕಾರ್ಯಕ್ರಮ ನಡೆಯಿತು. ಶ್ರೀ ರಾಘವೇಂದ್ರಸ್ವಾಮಿಗಳಿಗೆ ವಿಶೇಷವಾಗಿ ವಿವಿಧ ಹೂಗಳಿಂದ ಅಲಂಕರಿಸಿ, ಉತ್ಸವ ಮೂರ್ತಿ ಬಳಿ ಇರಿಸಿದ ಪಾದುಕೆಗೆ ಪಾದಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಲಾಯಿತು. ನಂತರ ಹಲವಾರು ಜಿಲ್ಲೆಗಳು, ಗ್ರಾಮಗಳಿಂದ ಬಂದಿದ್ದ ಸಾವಿರಾರು ಭಕ್ತರಿಗೆ ಅನ್ನದಾಸೋಹದ ರೂಪದಲ್ಲಿ ಪ್ರಸಾದ ವಿನಿಯೋಗ ಮಾಡಲಾಯಿತು.

ಶ್ರೀ ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ ಅಂಗವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಪ್ರತಿಮೆಗೆ ಕಲ್ಪವೃಕ್ಷ ಮತ್ತು ಕಾಮಧೇನು ಮಾದರಿಯಲ್ಲಿ ಕಮಲ ಹಾಗೂ ವಿವಿಧ ರೀತಿಯ ಹೂಗಳಿಂದ ಅಲಂಕರಿಸಲಾಗಿತ್ತು.

ಈ ಸಂದರ್ಭದಲ್ಲಿ ಅರ್ಚಕರಾದ ಸುರೇಂದ್ರಚಾರ್ಯ ಮತ್ತು ಶ್ರೀ ವಿಜೇಂದ್ರಚಾರ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net