ಮದ್ದೂರಿನಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನೆ ಉತ್ಸವ

11M.D.R.3
ಮಧ್ಯಾರಾಧನೆ ಅಂಗವಾಗಿ ಮದ್ದೂರು ಪಟ್ಟಣದ ಕೋಟೆ ಬೀದಿಯಲ್ಲಿರುವ ಶ್ರೀ ಗುರು ರಾಘವೇಂದ್ರಸ್ವಾಮಿಗಳ ಬೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.
Published on

ಮದ್ದೂರು: ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಅಂಗವಾಗಿ ಪಟ್ಟಣದ ಕೋಟೆ ಬೀದಿಯಲ್ಲಿರುವ ರಾಯರ ಮಠದಲ್ಲಿ ಸೋಮವಾರ ಮಧ್ಯಾರಾಧನೆ ಜರುಗಿತು.

ಮಧ್ಯಾರಾಧನೆ (ರಾಯರು ಬೃಂದಾವನಸ್ಥರಾದ ದಿನ) ಅಂಗವಾಗಿ ರಾಘವೇಂದ್ರಸ್ವಾಮಿ ಮಠದಲ್ಲಿ ಪಂಚಾಮೃತ ಅಭಿಷೇಕ, ಕೋಟೆ ಬೀದಿಯಲ್ಲಿ ರಾಯರ ಬೃಂದಾವನಕ್ಕೆ ಫಲ ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ರಾಯರ ಉತ್ಸವ, ಮಹಾ ಮಂಗಳಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು.

ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಸಿದ್ದ ಸಹಸ್ರಾರು ಭಕ್ತರು ರಾಘವೇಂದ್ರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ಮಠದ ವತಿಯಿಂದ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ಮಂಗಳವಾರ ಉತ್ತರಾರಾಧನೆ ಜರುಗಲಿದೆ ಎಂದು ಸಂಘದ ಅಧ್ಯಕ್ಷ ರಾಮಚಂದ್ರ ಪ್ರಸಾದ್, ಕಾರ್ಯನಿರ್ವಾಹಕ ಮೋಹನ್, ನಿರ್ದೇಶಕರಾದ ಗುಂಡೂರಾವ್, ಸತ್ಯ ನಾರಾಯಣರಾವ್, ನಾಗೇಂದ್ರ, ವೆಂಕಟೇಶ್ ಮೂರ್ತಿ, ಕೆ.ಆರ್.ಮಂಜುನಾಥ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net