ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನೆ

Raghavendra Swami, Uttaradhana, Ilakala,
ಇಳಕಲ್ಲ ನಗರದ ಕೂಡಲಸಂಗಮ ಕಾಲನಿಯ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನೆ ನಿಮಿತ್ತ ರಥೋತ್ಸವ ನಡೆಯಿತು. ಅರ್ಚಕ ವೆಂಕಟೇಶಾಚಾರ್ಯ ಶೆಡ್ಲಗೇರಿ, ಪ್ರಭು ಬೀಳಗಿ, ವಿನಾಯಕ ಮುದಗಲ್ಲ, ಸಿದ್ದರಾಮ ಸರೂರ ಇದ್ದರು.
Published on

ಇಳಕಲ್ಲ(ಗ್ರಾ): ಉತ್ತರಾರಾಧನೆ ನಿಮಿತ್ತ ಇಲ್ಲಿನ ಕೂಡಲಸಂಗಮ ಕಾಲನಿಯಲ್ಲಿರುವ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ರಾಯರ ಮಠದ ವತಿಯಿಂದ ಶನಿವಾರ ಮಧ್ಯಾಹ್ನ ರಥೋತ್ಸವ ಸಡಗರ ಸಂಭ್ರಮದಿಂದ ನಡೆಯಿತು.

ಮಠದ ನೂರಾರು ಭಕ್ತರು ತೇರನ್ನು ಶೃಂಗಾರ ಮಾಡಿ ಭಕ್ತಿಯಿಂದ ಎಳೆದು ಕೃತಾರ್ಥರಾದರು. ಅರ್ಚಕ ವೆಂಕಟೇಶಾಚಾರ್ಯ ಶೆಡ್ಲಗೇರಿ, ಮಠದ ಭಕ್ತರಾದ ಪ್ರಭು ಬೀಳಗಿ, ವಿನಾಯಕ ಮುದಗಲ್ಲ, ಸಿದ್ದರಾಮ ಸರೂರ, ಬಸಮ್ಮ ಕರ್ಲಿ, ಅಖಿಲಾ ಕುರಂದವಾಡ, ರಮೇಶ ಕಠಾರೆ, ನಾಗರಾಜ ಕಿರಗೊ, ಪ್ರಭು ಹಿರೇಮಠ, ಬ್ರಾಹ್ಮಣ ಸಮಾಜದ ಭಜನಾ ಮಂಡಳಿಯ ಸದಸ್ಯರು ಮತ್ತು ಮಂತ್ರಾಲಯ ಪಾದಯಾತ್ರಿಗಳ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net