

ಅಥಣಿ: ಪಟ್ಟಣದ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಘವೇಂದ್ರಸ್ವಾಮಿ ಆರಾಧನೆ ಕೊನೆಯ ದಿನದ ಅಂಗವಾಗಿ ಮಂಗಳವಾರ ಸಾವಿರಾರು ಭಕ್ತರ ಜಯಘೋಷ, ಭಕ್ತಿಗೀತೆ, ದಾಸರ ಪದಗಳ ನಡುವೆ ವಿಜೃಂಭಣೆಯಿಂದ ರಥೋತ್ಸವ ಜರುಗಿತು.
ಕೇದಿಗೆ, ಸೇವಂತಿ, ಮಲ್ಲಿಗೆ, ಗುಲಾಬಿ, ಕನಕಾಂಬರ, ಜಾಜಿ ಸೇರಿ ತರಹೇವಾರಿ ಹೂವುಗಳು, ಬಾಳೆಯ ದಿಂಡು, ತೆಂಗಿನ ಗರಿಗಳಿಂದ ಅಲಂಕೃತಗೊಂಡಿದ್ದ ರಥ ಭಕ್ತರ ಮನ ಸೆಳೆಯಿತು. ಹೋಮ, ಪೂರ್ಣಾಹುತಿ ಬಳಿಕ ರಥೋತ್ಸವ ಪ್ರಾರಂಭಗೊಂಡಿತು. ಭಕ್ತರು ಉತ್ತತ್ತಿ ಎಸೆದು ಭಕ್ತಿ ಅರ್ಪಿಸಿದರು. ಚಿಕ್ಕಮಕ್ಕಳಿಂದ ಕೋಲಾಟ, ಕಲಾವಿದರಿಂದ ಭಕ್ತಿಗೀತೆ ಸೇವೆ ನಡೆಯಿತು. ಬಳಿಕ ಅನ್ನಪ್ರಸಾದ ಸೇವೆ ನೆರವೇರಿತು.