

ಕಾರವಾರ: ಹಬ್ಬುವಾಡಾದ ರಾಘವೇಂದ್ರ ಮಠದಲ್ಲಿ ಆಗಸ್ಟ್ 11 ರಂದು ಜರುಗಲಿರುವ ಸ್ವಾಮಿಗಳ 25 ನೇ ಆರಾಧನಾ ಉತ್ಸವದ ಅಂಗವಾಗಿ ಮಠದಲ್ಲಿ ಭಜನೆ ಹಾಗೂ ಭರತನಾಟ್ಯ ಸ್ಪರ್ಧೆಗಳನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಭಜನಾ ಸ್ಪರ್ಧೆಯಲ್ಲಿ ಸುಮತಿ ದಾಮ್ಲೆ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರ ತಂಡ 3 ಸಾವಿರ ರೂ. ನಗದು ಬಹುಮಾನವಿರುವ ಪ್ರಥಮ, ಬಾಲ ಮಂದಿರ ಶಾಲೆ ದ್ವಿತೀಯ ಮತ್ತು ಹಿಂದು ಪ್ರೌಢಶಾಲೆಯ ತಂಡ ತೃತೀಯ ಸ್ಥಾನ ಪಡೆದು ಅನುಕ್ರಮವಾಗಿ 2 ಮತ್ತು 1 ರೂ.ಗಳ ನಗದು ಬಹುಮಾನಗಳನ್ನು ಪಡೆದುಕೊಂಡವು. ಶಿವಾಜಿ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿಯರ ತಂಡ ಸಮಾಧಾನಕರ ಬಹುಮಾನ ಪಡೆಯಿತು. ಜ್ಯೋತಿ ರಾವ್ ಮತ್ತು ಶ್ಯಾಮಲಾ ಭಟ್ ನಿರ್ಣಾಯಕರಾಗಿದ್ದರು. ಜಗದೀಶ ವೆರ್ಣೇಕರ್, ವಿನೋದ ನಾಯ್ಕ,ರಜನಿ ಕುಲ್ಕರ್ಣಿ ಸುಜಾತಾ ನಾಯ್ಕ ಬಹುಮಾನಗಳ ಪ್ರಾಯೋಜಿಸಿದ್ದರು. ಭರತನಾಟ್ಯ ಸ್ಪರ್ಧೆಯಲ್ಲಿ ನಾಟ್ಯರಾಣಿ ಭರತನಾಟ್ಯಮ್ ನೃತ್ಯ ಕಲಾ ಕೇಂದ್ರ ಪ್ರಥಮ , ಶ್ರೀರಸ್ತು ಕಲಾ ಕೇಂದ್ರ ದ್ವಿತಿಯ ಮತ್ತು ರಶ್ಮಿ ಕಲಾ ಲೋಕ ತೃತಿಯ ಸ್ಥಾನಗಳನ್ನು ಗಳಿಸಿ, ಅನುಕ್ರಮವಾಗಿ 5 ಸಾವಿರ ರೂ., 3 ಸಾವಿರ ಮತ್ತು 2 ಸಾವಿರ ರೂ.ಗಳ ನಗದು ಬಹುಮಾನ ಪಡೆದವು. ನೌಕಾನೆಲೆಯ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿಯರ ತಂಡ ಸಮಾಧಾನಕರ ಬಹುಮಾನ ಪಡೆಯಿತು. ಸೌಮ್ಯಾ ಹೆಗಡೆ ಮತ್ತು ಸುಪ್ರಿಮಾ ನಿರ್ಣಾಯಕರಾಗಿದ್ದರು. ವಿನಾಯಕ ಆರ್. ಹಬ್ಬು , ರಂಜನಾ ಹಬ್ಬು ಪ್ರಥಮ ಬಹುಮಾನದ ಪ್ರಾಯೋಜಕರಾಗಿದ್ದರು. 80 ಕ್ಕೂ ಅಽಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಠದ ಅರ್ಚಕ ಶ್ರೀನಿವಾಸ ಉಡುಪ, ಶ್ರವಣ ಕುಮಾರ ದೀಪ ಬೆಳಗಿಸಿ ಸ್ಪರ್ಧೆಗೆ ಚಾಲನೆ ನೀಡಿದರು. ರಾಘವೇಂದ್ರ ಬೃಂದಾವನ ಸಮಿತಿಯ ಕಾರ್ಯದರ್ಶಿ ಆರ್. ಎಸ್. ಹಬ್ಬು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ರಾಮಾ ನಾಯ್ಕ ವಂದಿಸಿದರು.