ರಸ್ತೆ ಅಭಿವೃದ್ಧಿಗೆ 68.48 ಕೋಟಿ ರೂ.ಅನುದಾನ ಮೀಸಲು

RAGHAVENDRA HITNAl KOppal MLA road issue protest
RAGHAVENDRA HITNAl
Published on

ಕೊಪ್ಪಳ: ಕವಲೂರು ಭಾಗದ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಅನುದಾನ ಮೀಸಲಿರಿಸಲಾಗಿದೆ. ಮುಂದಿನ ಮೂರು ವರ್ಷದಲ್ಲಿ ಎಲ್ಲ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದೆಂದು ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದ್ದಾರೆ.

ಕಳೆದ ಮೂರ್ನಾಲ್ಕು ದಿನದ ಹಿಂದೆ ರಸ್ತೆ ಅಭಿವೃೃದ್ಧಿಗಾಗಿ ಕವಲೂರು ಗ್ರಾಮದಲ್ಲಿ ನಡೆದ ಪ್ರತಿಭಟನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಈ ವಿಷಯವನ್ನು ಬಿಜೆಪಿ&-ಜೆಡಿಎಸ್​ ನಾಯಕರು ರಾಜಕೀಯಕ್ಕೆ ಎಳೆದು ತರುವ ಕೆಲಸ ಮಾಡುತ್ತಿದ್ದಾರೆ. ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ. ಅವರು ರಾಜಕೀಯ ಮಾಡಲಿ. ನಾವು ರಸ್ತೆ ಮಾಡಿ ತೋರಿಸುತ್ತೇವೆ. ಈಗಾಗಲೇ ಅನುದಾನ ಮೀಸಲಿರಿಸಿದ್ದು, ಕೆಲವು ಟೆಂಡರ್​ ಹಂತದಲ್ಲಿವೆ. ಎಲ್ಲ ರಸ್ತೆಗಳಿಗೆ ಅನುದಾನ ಒದಗಿಸಲಾಗಿದೆ. ಮುಂದಿನ 3 ವರ್ಷದಲ್ಲಿ ಎಲ್ಲ ಕಾಮಗಾರಿ ಪೂರ್ಣಗೊಳಿಸಲಾಗವುದೆಂದು ಮಾಹಿತಿ ನೀಡಿದ್ದಾರೆ.

ಅಳವಂಡಿ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ 68.48 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಕವಲೂರು& ಮುರ್ಲಾಪುರ ರಸ್ತೆ ಅಭಿವೃದ್ಧಿಗೆ 3.5 ಕೋಟಿ ರೂ., ಕವಲೂರು&ಬನ್ನಿಕೊಪ್ಪ ರಸ್ತೆ (ಗುಡಿಗೇರಿ ಮಾರ್ಗ) 2.55 ಕೋಟಿ ರೂ., ಕವಲೂರು&ಬನ್ನಿಕೊಪ್ಪ ರಸ್ತೆ 7.5 ಕೋಟೊಇ ರೂ., ಕವಲೂರು&ಮುರ್ಲಾಪುರ ರಸ್ತೆ 2.19 ಕೋಟಿ ರೂ., ಗುಡಿಗೇರಿ&ಹಳ್ಳಿಕೇರಿ ರಸ್ತೆ 7.26 ಕೋಟಿ ರೂ., ಗುಡಿಗೇರಿ&ಎಕ್ಲಾಸಪುರ ರಸ್ತೆ 4.47 ಕೋಟಿ ರೂ., ಅಳವಂಡಿ&ನಿಲೋಗಿಪುರ ರಸ್ತೆ 1.7 ಕೋಟಿ ರೂ., ಅಳವಂಡಿ&ಟ್ಟಿರಡ್ಡಿಹಾಳ ರಸ್ತೆ 3.66 ಕೋಟಿ ರೂ., ಭೈರಾಪುರ&ಬೆಟಗೇರಿ ರಸ್ತೆ 7.64 ಕೋಟಿ ರೂ., ಮೋರನಾಳ&ಬೋಚನಳ್ಳಿ ರಸ್ತೆ 1.52 ಕೋಟಿ ರೂ., ಹೈದರ ನಗರ&ಹಟ್ಟಿ ರಸ್ತೆ 5 ಕೋಟಿ ರೂ., ಕೇಸಲಾಪುರ&ಬೆಳಗಟ್ಟಿ ರಸ್ತೆ ಅಭಿವೃದ್ಧಿಗೆ 20 ಕೋಟಿ ರೂ. ಮೀಸಲಿರಿಸಿದ್ದು, ಹಂತ ಹಂತವಾಗಿ ಎಲ್ಲ ರಸ್ತೆ ಅಭಿವೃದ್ಧಿಪಡಿಸುವುದಾಗಿ ತಿಳಿಸಿದ್ದಾರೆ.

ಕವಲೂರು ಗ್ರಾಮದ 14 ಪ್ರತಿಭಟನಕಾರರ ಮೇಲೆ ಪ್ರಕರಣ ದಾಖಲಾದ ಬಗ್ಗೆ ನನ್ನ ಗಮನಕ್ಕಿಲ್ಲ. ಸಂಬಂಧಿಸಿದ ಅಧಿಕಾರಿಗಳ ಜತೆಗೆ ಮಾತನಾಡಿ ಮಾಹಿತಿ ಪಡೆಯುವೆ. ಪ್ರಕರಣ ಇತ್ಯರ್ಥಕ್ಕೆ ಪ್ರಯತ್ನಿಸುವೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net