

ಕೊಪ್ಪಳ: ಬಿಜೆಪಿ-ಜೆಡಿಎಸ್ಗೆ ಚರ್ಚಿಸಲು ಯಾವುದೇ ವಿಷಯಗಳಿಲ್ಲ. ಸುಮ್ಮನೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪಾದಯಾತ್ರೆ ಮಾಡಲು ಮುಂದಾಗಿದ್ದಾರೆಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ನಮ್ಮ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳು ಜನರ ಮನ ಗೆದ್ದಿವೆ. ಉತ್ತಮ ಆಡಳಿತ ನಡೆಯುತ್ತಿದೆ. ಸಿದ್ದರಾಮಯ್ಯ ಜನರಿಗೆ ಕೊಟ್ಟ ಮಾತಿನಂತೆ ಗಟ್ಟಿಯಾಗಿ ನಿಂತಿದ್ದಾರೆ. ಇದನ್ನು ಸಹಿಸದ ವಿಪಕ್ಷಗಳು ಮುಡಾದಲ್ಲಿ ಹಗರಣ ನಡೆಯದಿದ್ದರೂ ಆರೋಪ ಮಾಡುತ್ತಿವೆ. ಹೊಟ್ಟೆಕಿಚ್ಚಿನಿಂದ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಅದಕ್ಕೆ ಮಹತ್ವ ನೀಡುವ ಅಗತ್ಯವಿಲ್ಲ. ಕುತಂತ್ರ ಮಾಡಿ ಕೆಟ್ಟ ಹೆಸರು ತರಲು ಯತ್ನಿಸುತ್ತಿದ್ದಾರೆ. ಯಾರೂ ಏನೂ ಮಾಡಿದರೂ ಸಿಎಂಗೆ ಏನೂ ಆಗುವುದಿಲ್ಲ. ಉಳಿದ ಅವಧಿಗೂ ಅವರೇ ಸಿಎಂ ಆಗಿ ಮುಂದುವರೆಯುವುದರಲ್ಲಿ ಅನುಮಾನವಿಲ್ಲವೆಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಈಗಾಗಲೇ ತನಿಖೆ ನಡೆಯುತ್ತಿದೆ. ಹೀಗಿದ್ದರೂ ಪಾದಯಾತ್ರೆ ಮಾಡಲು ಮುಂದಾಗಿದ್ದು ಅಪ್ರಸ್ತುತ. ನಮ್ಮ ಸರ್ಕಾರ ಜನರ ಮನ ಗೆದ್ದಿದೆ. ಕ್ಷುಲ್ಲುಕ ಕಾರಣಕ್ಕೆ ರಾಜಕಾರಣ ಮಾಡುತ್ತಿದ್ದಾರೆ. ಇದೆಲ್ಲವನ್ನು ರಾಜ್ಯದ ಜನರು ಸೂಕ್ಷ$್ಮವಾಗಿ ಗಮನಿಸುತ್ತಿದ್ದಾರೆ. ಯಾರು ಜನರ ಪರವಾಗಿದ್ದಾರೆಂದು ಅವರಿಗೆ ಗೊತ್ತಿದೆ. ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲವೆಂದರು.