

ಮಂಡ್ಯ: ನಗರದ ವ್ಯಾಸರಾಜ ಮಠ(ಸೋಸಲೆ)ದಲ್ಲಿ ಆ.29ರಿಂದ ಸೆ.2ರವರೆಗೆ ರಾಘವೇಂದ್ರ ಗುರು ಸಾರ್ವಭೌಮರ 352ನೇ ಆರಾಧನ ಮಹೋತ್ಸವ ಆಯೋಜಿಸಲಾಗಿದೆ.
29ರಂದು ಸಂಜೆ 6.30ಕ್ಕೆ ಲಕ್ಷ್ಮೀಪೂಜೆ, ಧಾನ್ಯಪೂಜೆ, 7.30ಕ್ಕೆ ಭೂಮಿಕ ತಂಡದಿಂದ ಭರತನಾಟ್ಯ, 30ರಂದು ಬೆಳಗ್ಗೆ 6.30ಕ್ಕೆ ಪಂಚಾಮೃತ ಅಭಿಷೇಕ, 10.30ಕ್ಕೆ ಕನಕಾಭಿಷೇಕ, ರಾತ್ರಿ 7.30ಕ್ಕೆ ದಾಸರ ಪದಗಳ ಗಾಯನ, 31ರಂದು ಗುರುಸಾರ್ವಭೌಮರ ಪೂರ್ವಾರಾಧನೆ ಅಂಗವಾಗಿ ಬೆಳಗ್ಗೆ 10ಗಂಟೆಗೆ ಸಾಮೂಹಿಕ ಸತ್ಯನಾರಾಯಣಪೂಜೆ, 7.30ಕ್ಕೆ ದಾಸವಾಣಿ, ಸೆ.1ರಂದು ಮಧ್ಯಾರಾಧನೆ ಅಂಗವಾಗಿ ಬೆಳಗ್ಗೆ 9.30ಕ್ಕೆ ಪಲ್ಲಕ್ಕಿ ಉತ್ಸವ ಮತ್ತು ಮಹಾರಥೋತ್ಸವ, ರಾತ್ರಿ 7ಕ್ಕೆ ಪ್ರವಚನ, 9ಗಂಟೆಗೆ ಮಹಾಮಂಗಳಾರತಿ, 2ರಂದು ಉತ್ತರರಾಧನೆ ಅಂಗವಾಗಿ ಬೆಳಗ್ಗೆ 10ಗಂಟೆಗೆ ಕನಕಾಭಿಷೇಕ, ರಾತ್ರಿ 7.30ಕ್ಕೆ ದಾಸವಾಣಿ ಹಾಗೂ 9ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ. ಸೆ.6ರಂದು ಕೃಷ್ಣ ಜನಾಷ್ಠಮಿ ಅಂಗವಾಗಿ ರಾತ್ರಿ 9ಗಂಟೆಗೆ ವಿಶೇಷ ಪೂಜಾಲಂಕಾರ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.