ನೆಲಮಂಗಲ: ಸ್ನೇಹಿತರ ರ್ಯಾಗಿಂಗ್ಗೆ ಹೆದರಿ ವಿದ್ಯಾರ್ಥಿಯೊಬ್ಬ ಜು.11ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ವಿಚಾರ ಆತನ ಸೆಲ್ಫಿ ವೀಡಿಯೋ ಮೂಲಕ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರು ಉತ್ತರ ತಾಲೂಕಿನ ನಂದರಾಮಯ್ಯನ ಪಾಳ್ಯದ ನಿವಾಸಿ ಅರುಣ್ (22) ಮೃತ. ಮೂಲತ@ ಹಾಸನ ನಿವಾಸಿಯಾಗಿದ್ದ ಚನ್ನಕೇಶವ ಹಾಗೂ ತುಳಸಿ ದಂಪತಿ ನಾಲ್ಕೆ$ದು ವರ್ಷದಿಂದ ನಂದರಾಮಯ್ಯನಪಾಳ್ಯದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದು, ಹಿರಿಯ ಮಗ ಅರುಣ್ ಬಾಗಲೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ವಾಸ್ತುಶಿಲ್ಪ ಅಧ್ಯಯನ ಮಾಡುತ್ತಾ ಕಾಲೇಜಿನ ಪಿಜಿಯಲ್ಲೇ ವಾಸವಾಗಿದ್ದ.
ಜು.9ರಂದು ಕಾಲೇಜಿನಿಂದ ಮನೆಗೆ ಬಂದಿದ್ದ ಅರುಣ್ ಪಾಲಕರೊಂದಿಗೆ ಖುಷಿಯಾಗಿದ್ದ. ಜು. 11ರಂದು ತಂದೆ, ತಾಯಿ ಕೆಲಸಕ್ಕೆ ತೆರಳಿದ್ದ ವೇಳೆ ಸೆಲ್ಫಿ ವೀಡಿಯೋ ಮಾಡಿ ಸ್ನೇಹಿತರ ರ್ಯಾಗಿಂಗ್ ಬಗ್ಗೆ ಹೇಳಿಕೊಂಡಿದ್ದ. ನನ್ನ ಬೆನ್ನ ಹಿಂದೆ ಕೆಟ್ಟ ಕೆಟ್ಟದಾಗಿ ಮಾತನಾಡುತ್ತ್ತಾರೆ ಎಂದು ವೀಡಿಯೋದಲ್ಲಿ ಹೇಳಿದ್ದ. ಬಳಿಕ ಆ ವೀಡಿಯೋವನ್ನು ಕಾಲೇಜಿನ ಗ್ರೂಪ್ಗೆ ಹರಿಬಿಟ್ಟು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ವಿಡಿಯೋ ಇತ್ತೀಚೆಗೆ ವೈರಲ್ ಆಗಿದ್ದು, ಅದನ್ನು ಗಮನಿಸಿದ ಪಾಲಕರು ಮತ್ತೊಮ್ಮೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾರೆ.
ವಿಶೇಷ ಕಲೆ ಹೊಂದಿದ್ದ ಅರುಣ್ : ಚಿತ್ರಕಲೆಯಲ್ಲೂ ಆಸಕ್ತಿ ಹೊಂದಿದ್ದ ಅರುಣ್ ಕೇವಲ 5 ನಿಮಿಷದಲ್ಲಿ ಭಾವಚಿತ್ರ, ವಿಭಿನ್ನ ಚಿತ್ರಗಳನ್ನು ಬಿಡಿಸುತ್ತಿದ್ದ. ಜತೆಗೆ ಗಣ್ಯಾತಿಗಣ್ಯರು, ಚಲನಚಿತ್ರ ನಟರು ಹಾಗೂ ಪಾರಂಪರಿಕ ಕಲಾಕೃತಿಗಳನ್ನೂ ಬಿಡಿಸುತ್ತಿದ್ದ. ಅಲ್ಲದೇ, ಸಿನಿಮಾ ತಾರೆಯರ ಭಾವಚಿತ್ರ ಬಿಡಿಸಿ ಮೆಚ್ಚುಗೆ ಗಳಿಸಿದ್ದ. ಪೇಂಟಿಂಗ್ನಲ್ಲಿ ಅಪಾರ ಆಸಕ್ತಿ ಹಾಗೂ ಪ್ರಸಿದ್ದಿ ಹೊಂದಿದ್ದ.