ದನಗಳ ಕೊರಳಿಗೆ ರೇಡಿಯಂ ಪಟ್ಟಿ

IMG-20230907-WA0057
Published on

ಕಾರವಾರ: ಸದಾಶಿವಗಡದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ಬಿಡಾಡಿ ದನಗಳ ಕೊರಳಿಗೆ ಸ್ಥಳಿಯ ಶಿವಾಜಿ ಬಾಯ್ಸ್ ತಂಡದ ಸದಸ್ಯರು ಬುಧವಾರ ರಾತ್ರಿ ರೇಡಿಯಂ ಕೊರಳ ಪಟ್ಟಿ ಕಟ್ಟಿದರು.

‘ಕೃಷ್ಣಾಷ್ಟಮಿ ಹಬ್ಬದ ಸಂದರ್ಭದಲ್ಲಿ ಗೋವುಗಳಿಗೆ ಕೊರಳ ಪಟ್ಟಿ ಕಟ್ಟುವ ಮೂಲಕ ಅವುಗಳು ಅಪಘಾತಕ್ಕೆ ಒಳಗಾಗುವದನ್ನು ತಪ್ಪಿಸುವ ಪ್ರಯತ್ನ ನಡೆಸಿದ್ದೇವೆ’ ಎಂದು ತಂಡದ ಸದಸ್ಯರು ಹೇಳಿದರು.

‘ರಾತ್ರಿ ವೇಳೆ ಹೆದ್ದಾರಿಯುದ್ದಕ್ಕೂ ಬಿಡಾಡಿ ದನಗಳು ಮಲಗಿರುತ್ತವೆ.

ವಾಹನಗಳ ಓಡಾಟವೂ ಹೆಚ್ಚಿರುವ ಕಾರಣ ಗೋವುಗಳಿಗೆ ಬಡಿದು ವಾಹನ ಸವಾರರು ಗಾಯಗೊಳ್ಳುವ ಜತೆಗೆ ಗೋವುಗಳು ಸಾವನ್ನಪ್ಪುತ್ತಿವೆ.

ಅವುಗಳನ್ನು ತಡೆಯಲು ರಾತ್ರಿ ವೇಳೆ ಹೊಳೆಯುವ ಕೊರಳ ಪಟ್ಟಿ ಕಟ್ಟಲಾಗಿದೆ.

ಇದರಿಂದ ಸಾಧ್ಯವಾದಷ್ಟರಮಟ್ಟಿಗೆ ಅಪಘಾತ ತಪ್ಪಿಸಬೇಕು ಎಂಬುದು ನಮ್ಮ ಉದ್ದೇಶ’ ಎಂದರು.

ತಂಡದ ವಿನೋದ ಕೊಠಾರಕರ್, ರೂಪೇಶ ಕೊಠಾರಕರ್, ಸಾಯಿಪ್ರಕಾಶ ಧಾರವಾಡಕರ್, ಸೋಹನ್ ನಾಯ್ಕ, ಓಂಕಾರ ನಾಯ್ಕ, ಅಭಿ ರಾಣೆ, ವಿನಾಯಕ ಗಾಂವಕರ್, ರೋಶನ್ ನಾಯ್ಕ, ಪರೇಶ್ ರಾಣೆ, ಶುಭಂ ರಾಣೆ, ಗೌರವ ನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net