ಟ್ರ್ಯಾಕ್ಟರ್‌ಗಳ ಹಿಂದೆ ರೇಡಿಯಂ ಸ್ಟಿಕ್ಕರ್

CHN
Published on

ಚನ್ನಗಿರಿ: ರಸ್ತೆಗಳಲ್ಲಿ ಟ್ರ್ಯಾಕ್ಟರ್‌ಗಳ ಹಿಂದೆ ರೇಡಿಯಂ ಸ್ಟಿಕ್ಕರ್ ಅಳವಡಿಸುವ ಮೂಲಕ ಪೊಲೀಸ್ ಇಲಾಖೆಯಿಂದ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಡಿವೈಎಸ್‌ಪಿ ರುದ್ರಪ್ಪ ಉಜ್ಜನಕೊಪ್ಪ ತಿಳಿಸಿದರು.

ತಾಲೂಕಿನ ಅಜ್ಜಿಹಳ್ಳಿ ಗ್ರಾಮ ವ್ಯಾಪ್ತಿಯ ತರಳಬಾಳು ವೃತ್ತದ ಬಳಿ ಟ್ರ್ಯಾಕ್ಟರ್‌ಗಳ ಹಿಂದೆ ರೇಡಿಯಂ ಸ್ಟಿಕ್ಕರ್ ಆಳವಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು.

ರೈತರು, ವ್ಯವಹಾರ ಮಾಡುವವರು ಹಾಗೂ ಗುತ್ತಿಗೆದಾರರು ದುಡಿಮೆಗಾಗಿ ಲಕ್ಷಾಂತರ ರೂ. ಹಣ ನೀಡಿ ಟ್ರಾೃಕ್ಟರ್ ಖರೀದಿಸಿರುತ್ತಾರೆ. ಆದರೆ, ಟ್ರಾೃಲಿಗೆ ರೇಡಿಯಂ ಸ್ಟಿಕರ್ ಇರುವುದಿಲ್ಲ. ಇದರಿಂದ ಹಿಂಬದಿ ಬರುವ ವಾಹನಗಳಿಗೆ ಟ್ರಾೃಕ್ಟರ್ ಕಾಣಿಸಲ್ಲ. ಇದರಿಂದಾಗಿ ಅಪಘಾತ ಹೆಚ್ಚಾಗುತ್ತಿವೆ ಎಂದರು.

ವಾಹನಕ್ಕೆ ಹಿಂದೆ ಯಾವುದೇ ತರಹದ ಸೂಚನೆ ನೀಡುವ ಫಲಕಗಳು ಇಲ್ಲದೆ ನೇರವಾಗಿ ಬಂದು ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪ್ರಕರಣ ದಿನನಿತ್ಯ ಸಾಮಾನ್ಯವೆನಿಸಿವೆ. ಆದ್ದರಿಂದ ಪ್ರತಿಯೊಬ್ಬ ಮಾಲಿಕರು ಟ್ರ್ಯಾಲಿ ಮೇಲೆ ಕಡ್ಡಾಯವಾಗಿ ರೇಡಿಯಂ ಸ್ಟಿಕ್ಕರ್ ಅಳವಡಿಸಬೇಕು. ಇಲ್ಲದಿದ್ದರೆ ಅಂತಹ ವಾಹನ ಹಾಗೂ ಚಾಲಕರ ವಿರುದ್ಧ ದೂರು ದಾಖಲು ಮಾಡಲಾಗುತ್ತದೆ ಎಂದರು.

ಪ್ರತಿಯೊಬ್ಬರು ರಸ್ತೆ ನಿಯಮ ಪಾಲಿಸಬೇಕು, ರಸ್ತೆ ಬದಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಬಾರದು, ಟ್ರ್ಯಾಲಿಯನ್ನು ತರುವಾಗಲೇ ಸ್ಟಿಕ್ಕರ್ ಅಳವಡಿಸಬೇಕು, ಸುರಕ್ಷತೆಯಿಂದ ವಾಹನ ಚಾಲನೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ 60ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿಗೆ ರೇಡಿಯಂ ಸ್ಟಿಕ್ಕರ್ ಅಳವಡಿಸಲಾಯಿತು. ಸಿಪಿಐ ಲಿಂಗನಗೌಡ್ರು, ಪಿಎಸ್‌ಐ ಗುರುಶಾಂತಯ್ಯ, ಸೈಪುದ್ದೀನ್, ರೂಪ್ಲಿಬಾಯಿ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net