ವಿದ್ಯಾರ್ಥಿಗಳಿಂದ ರೇಡಿಯೋ ನಿಲಯ ಆರಂಭ

Bdk_Radio station
Published on

ಮಂಜೇಶ್ವರ: ಮಂಜೇಶ್ವರ ಉದಯ ಶಾಲೆಯ ವಿದ್ಯಾರ್ಥಿಗಳು ತಾವೇ ರೇಡಿಯೋ ನಿಲಯ ರೂಪಿಸಿ ವಿನೂತನ ಪ್ರಯತ್ನದೊಂದಿಗೆ ಗಮನ ಸೆಳೆದಿದ್ದಾರೆ.

ನಿಲಯದಲ್ಲಿ ಹಾಡುಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಶೈಕ್ಷಣಿಕ ಚರ್ಚೆಗಳು ಹಾಗೂ ಸಂದರ್ಶನಗಳನ್ನು ಪ್ರಸಾರ ಮಾಡಲು ಮುಂದಾಗಿದ್ದು ಜಿಲ್ಲೆಯಲ್ಲೇ ಇದು ವಿದ್ಯಾರ್ಥಿಗಳ ಮೊದಲ ಪ್ರಯತ್ನವಾಗಿದ್ದು ಭಾರಿ ಪ್ರಶಂಸೆ ವ್ಯಕ್ತವಾಗಿದೆ.

ಈ ರೇಡಿಯೋ ಎಫ್‌ಎಂ ಪ್ರಸಾರವನ್ನು ಪೂರ್ಣವಾಗಿ ವಿದ್ಯಾರ್ಥಿಗಳೇ ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಾದ ನಫೀಸತ್ ಫಿದಾ ಹಾಗೂ ಮಹ್ಸಿನಾ ನಿರೂಪಕರು, ತಂತ್ರಜ್ಞರು, ಮತ್ತು ವಿಷಯ ನಿರ್ವಹಣೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಇದರ ಮುಖ್ಯ ಉದ್ದೇಶವೆಂದರೆ ಸ್ಥಳೀಯ ಸಂಸ್ಕೃತಿ, ಭಾಷೆ ಮತ್ತು ಪರಂಪರೆಯನ್ನು ಉತ್ತೇಜಿಸುವುದು ಮತ್ತು ಸಾರ್ವಜನಿಕರಿಗೆ ಜ್ಞಾನವರ್ಧಕ ಮಾಹಿತಿಯನ್ನು ತಲುಪಿಸುವುದು. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಸಂವಹನ ಕೌಶಲ ಹಾಗೂ ತಂಡದಲ್ಲಿ ಕೆಲಸ ಮಾಡುವ ಗುಣಗಳನ್ನು ವೃದ್ಧಿಸುವುದು. ಆಧುನಿಕ ತಂತ್ರಜ್ಞಾನಕ್ಕೆ ಪರ್ಯಾಯವಾಗಿ, ಹಳೆಯ ಕಾಲದ ರೇಡಿಯೋ ಮಾದರಿಯ ಬಳಕೆ ಮೂಲಕ ಸಮುದಾಯ ಸಂಪರ್ಕಿಸುವ ಉದ್ದೇಶ ಎಂದು ಶಿಕ್ಷಕರು ವಿವರಿಸಿದ್ದಾರೆ.

ಮಂಜೇಶ್ವರ ಎಸ್.ಎ.ಟಿ. ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕ ಹಾಗೂ ಬರಹಗಾರ ಗಣೇಶ್ ಪ್ರಸಾದ್ ನಾಯ್ಕ ಬುಧವಾರ ವಿದ್ಯಾರ್ಥಿಗಳಿಂದ ಸಜ್ಜಾದ ರೇಡಿಯೋ ನಿಲಯಕ್ಕೆ ಚಾಲನೆ ನೀಡಿದರು. ಪ್ರಾಂಶುಪಾಲ ಜೆರಾಲ್ಡ್ ಐವನ್ ಕ್ರಾಸ್ತಾ, ಕ್ಯಾಂಪಸ್ ನಿರ್ದೇಶಕ ಸಂತೋಷ್ ಡಿಸೋಜ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net