ಮಾಹಿತಿ ಒದಗಿಸುವ ಮಾಧ್ಯಮ ರೇಡಿಯೊ

Radio is an informative media
ಇಂಡಿ ತಾಲೂಕಿನ ಹಿರೇರೂಗಿ ಯುಬಿಎಸ್​ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ರೇಡಿಯೋ ದಿನದಲ್ಲಿ ಸಂತೋಷ ಬಂಡೆ ಮಾತನಾಡಿದರು. ಎಸ್​.ಎಸ್​.ಅರಬ್​, ಎನ್​.ಬಿ.ಚೌಧರಿ, ಎಸ್​.ಪಿ.ಪೂಜಾರಿ, ಅಲ್ಫಿಯಾ ಇದ್ದರು.
Published on

ಇಂಡಿ: ಜಗತ್ತಿನಲ್ಲೇ ಅತಿಹೆಚ್ಚು ಬಳಕೆಯಾದ ಸಂವಹನ ಮಾಧ್ಯಮಗಳಲ್ಲಿ ರೇಡಿಯೊ ಒಂದಾಗಿದೆ. ಜನತೆಗೆ ಸರ್ಕಾರದ ಸಂದೇಶ, ಜ್ಞಾನ, ಶಿಣ, ಮನರಂಜನೆ ನೀಡುವಲ್ಲಿ ವ್ಯಾಪಕವಾಗಿ ಬಳಸುವ ಮಾಧ್ಯಮವಾಗಿದೆ ಎಂದು ಶಿಕ ಸಂತೋಷ ಬಂಡೆ ಹೇಳಿದರು.

ಶನಿವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್​ ಶಾಲೆಯಲ್ಲಿ ಹಮ್ಮಿಕೊಂಡಿದ್ದ 'ವಿಶ್ವ ರೇಡಿಯೊ ದಿನ' ಉದ್ಘಾಟಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಹಳ್ಳಿ ಜನರ ದೈನಂದಿನ ಜೀವನದ ಭಾಗವಾಗಿದ್ದ ರೇಡಿಯೊ ಕೃಷಿ, ವಿಜ್ಞಾನ, ಕಲಿಕೆಯಂತಹ ಅನೇಕ ವಿಚಾರಗಳನ್ನು ಜನರಿಗೆ ತಲುಪಿಸುತ್ತಿತ್ತು. ಸಂಸತಿ ಮತ್ತು ಸಂಪ್ರದಾಯಗಳ ಬಗ್ಗೆ ಮಾಹಿತಿ ಒದಗಿಸುವಲ್ಲಿ ಮುಂಚೂಣಿಯಲ್ಲಿತ್ತು ಎಂದು ಹೇಳಿದರು.

ಅಧ್ಯತೆ ವಹಿಸಿದ್ದ ಮುಖ್ಯಶಿಕ ಎಸ್​.ಎಸ್​.ಅರಬ ಮಾತನಾಡಿ, ಪ್ರಜಾಪ್ರಭುತ್ವ ಬಲಪಡಿಸುವಲ್ಲಿ ರೇಡಿಯೊ ಬಹುಮುಖ್ಯ ಪಾತ್ರ ವಹಿಸಿದೆ ಎಂದರು.

ಶಿಕರಾದ ಎನ್​.ಬಿ.ಚೌಧರಿ, ಎಸ್​.ಪಿ.ಪೂಜಾರಿ, ಅಲ್ಫಿಯಾ ಅಂಗಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net