ರೇಡಿಯೋ ಜ್ಞಾನಾರ್ಜನೆಗೆ ಪೂರಕ ಮಾಧ್ಯಮ

24 nrp 2
Published on

ಎನ್.ಆರ್.ಪುರ: ರೇಡಿಯೋ ಜ್ಞಾನಾರ್ಜನೆಗೆ ಪೂರಕ ಮಾಧ್ಯಮವಾಗಿದ್ದು ಪ್ರತಿ ನಿತ್ಯ ರೇಡಿಯೋ ಕೇಳುವುದರಿಂದ ಕನ್ನಡ ಭಾಷ ಜ್ಞಾನ, ಪದಗಳ ಉಚ್ಛಾರಣೆ ಮಾಡುವ ಬಗ್ಗೆ ಅರಿವು ಮೂಡಲಿದೆ ಎಂದು ಆಕಾಶವಾಣಿ ಭದ್ರಾವತಿಯ ನಿವೃತ್ತ ಹಿರಿಯ ಉದ್ಘೋಷಕಿ ಎ.ಎನ್.ಮಂಜುಳಾ ಹೇಳಿದರು.
ತಾಲೂಕು ಸಿರಿಗನ್ನಡ ವೇದಿಕೆ ತಾಲೂಕು ಘಟಕ ಹಾಗೂ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಡೆದ ಶ್ರಾವಣ ನುಡಿಸಿರಿ ಕಾರ್ಯಕ್ರಮದಲ್ಲಿ ಅಂದಿನ ರೇಡಿಯೋ, ಇಂದಿನ ದೂರದರ್ಶನ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಅಂದಿನ ರೇಡಿಯೋ ಇಂದಿಗೂ ಸಹ ಅಂದಿನಂತೇ ಇದೆ. ರೇಡಿಯೋ ಕಾರ್ಯಕ್ರಮ ಬದಲಾಗಿಲ್ಲ. ಗುಣಮಟ್ಟ ಕಡಿಮೆಯಾಗುತ್ತಿದೆ . ದೂರದರ್ಶನದಲ್ಲಿ ಇಂದು ಹತ್ತಾರು ಖಾಸಗಿ ಚಾನಲ್‌ಗಳು ಇದ್ದು ಬೆಳಗ್ಗಿನಿಂದ ಹೇಳಿದ್ದನ್ನೇ ಹೇಳುವ ಪ್ರವೃತ್ತಿ ಇದೆ. ಇದರಿಂದ ಮಾನಸಿಕ ನೆಮ್ಮದಿ ಹಾಳಾಗುತ್ತದೆ ಎಂದರು.
ದೂರದರ್ಶನ ನೋಡುವುದರಿಂದ ನಮ್ಮ ಸಮಯ ವ್ಯರ್ಥವಾಗುತ್ತದೆ. ರೇಡಿಯೋ ಕೇಳುತ್ತ ಕೆಲಸ ಮಾಡಬಹುದು. ರೇಡಿಯೋ ಮೂಲಕ ಯಾವುದೇ ಭಾಷೆಯ ವಿಚಾರಗಳನ್ನು ಆಲಿಸಬಹುದು. ರೇಡಿಯೋ ಆಲಿಸುವುದರಿಂದ ಕಿವಿಗೆ ಇಂಪು, ಮನಸ್ಸಿಗೂ ನೆಮ್ಮದಿ ದೊರೆಯುತ್ತದೆ. ಪ್ರತಿಯೊಬ್ಬರು ರೇಡಿಯೊ ಕೇಳುವ, ದಿನಪತ್ರಿಕೆ ಪ್ರತಿ, ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಉತ್ತಮ ಜ್ಞಾನ ಪಡೆಯಬಹುದು. ಕನ್ನಡದ ಬಗ್ಗೆ ಜ್ಞಾನವಿದ್ದರೆ ಮಾತ್ರ ಇಂಗ್ಲಿಷ್ ಭಾಷಯನ್ನು ಸುಲಭವಾಗಿ ತರ್ಜುಮೆ ಮಾಡಲು ಸಾಧ್ಯ. ಪ್ರತಿಯೊಬ್ಬರು ಸ್ಪಷ್ಟವಾಗಿ ಕನ್ನಡ ಬರೆಯಬೇಕು, ಸ್ಪಷ್ಟವಾಗಿ ಮಾತನಾಡಬೇಕು ಎಂದು ಸಲಹೆ ನೀಡಿದರು.
ಎ.ಎನ್.ಮಂಜುಳಾ, ಶಾಮಲ ಸತೀಶ್, ಹಿರಿಯ ಸಾಹಿತಿ ಜಯಮ್ಮ, ಜಾನಪದ ಕಲಾವಿದ ಲೋಕೇಶ್ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಸಿರಿಗನ್ನಡ ವೇದಿಕೆ ಅಧ್ಯಕ್ಷೆ ಕೆ.ಪಿ.ಮೀನಾಕ್ಷಿ ಕಾಂತರಾಜ್, ಶಾಶ್ವತಿ ಮಹಿಳಾ ಉಮಾ ದಿವಾಕರ್, ಚೈತ್ರ ರಮೇಶ್,ಅನ್ನಪೂರ್ಣ ಸುರೇಶ್, ಸೀಮಾ ಸದಾನಂದ, ವಾಹಿನಿ ರವಿಶಂಕರ್ ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net