

ಮುಂಡರಗಿ: ಸ್ಥಳೀಯ ಜಗದ್ಗುರು ಅನ್ನದಾನೀಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಶನಿವಾರ ಶಾಲಾ ಮಕ್ಕಳಿಗೆ ಕೃಷ್ಣ-ರಾಧೆಯ ವೇಷ ಧರಿಸುವ ಕಾರ್ಯಕ್ರಮ ಜರುಗಿತು.
ಮಕ್ಕಳು ಕೃಷ್ಣ, ರಾಧೆಯ ವೇಷದಲ್ಲಿ ಗಮನ ಸೆಳೆದರು. ಕಾರ್ಯಕ್ರಮದಲ್ಲಿ 2023-24ನೇ ಸಾಲಿನ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಮತ್ತು ಪ್ರತಿಭಾ ಕಾರಂಜಿಯಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆದ ಮಕ್ಕಳಿಗೆ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಡಾ. ಸಿ.ಸಿ. ವಾಚದಮಠ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ವೆಂಕಟೇಶ ದಾಸಕನಕಪ್ಪನವರ ಉಪನ್ಯಾಸ ನೀಡಿದರು.
ದೊಡ್ಡಪ್ಪ ಅಂಗಡಿ, ವೀರೇಶ ಸಜ್ಜನರ, ಡಾ. ಬಿ.ಜಿ. ಜವಳಿ, ಶಿಕ್ಷಕರಾದ ಯು.ಪಿ. ಪೂಜಾರ, ಎಚ್.ಬಿ. ಸುರೇಶ, ಆರ್.ಬಿ. ದಂಡಿನ, ಶಶಿಕಲಾ ಬಿಚ್ಚಾಲಿ, ಸಾವಿತ್ರಿ ಮಲಾರ್ಜಿ, ಗೀತಾ ಕೊಪ್ಪಳ ಇತರರು ಇದ್ದರು. ಜೆ.ಎಂ. ಗ್ರಾಮಪುರೋಹಿತ ಕಾರ್ಯಕ್ರಮ ನಿರೂಪಿಸಿದರು. ಸಾವಿತ್ರಿ ಗಾಲಿ ವಂದಿಸಿದರು.