ರಾಧೆ-ಕೃಷ್ಣ ವೇಷದಲ್ಲಿ ಗಮನಸೆಳೆದ ಮಕ್ಕಳು

25BK2
ಬಸವಕಲ್ಯಾಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಧೆ-ಕೃಷ್ಣ ವೇಷ-ಭೂಷಣದಲ್ಲಿ ಮಕ್ಕಳು ಗಮನ ಸೆಳೆದದರು. ವೈದ್ಯಾಧಿಕಾರಿ ಡಾ.ಸಂಗೀತಾ ಮಂಠಾಳೆ, ಗೌರೀಶ ದಾಬಕೆ, ಶ್ರೀನಾಥ ಕಣಜಿ, ಕವಿತಾ ಇದ್ದರು.
Published on

ಬಸವಕಲ್ಯಾಣ: ನಗರದ ಪ್ರಗತಿ ಶಿಕ್ಷಣ ಸಂಸ್ಥೆಯ ಕಿಡ್ಸ್ ಕಿಂಗಡಮ್ ಪ್ಲೇ ಸ್ಕೂಲ್ ಮತ್ತು ಇರಾ ಪಬ್ಲಿಕ್ ಸ್ಕೂಲ್‌ನಲ್ಲಿ ಭಾನುವಾರ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಪುಟ್ಟ-ಪುಟ್ಟ ಮಕ್ಕಳು ಬಣ್ಣ-ಬಣ್ಣದ ಉಡುಪಿನಲ್ಲಿ ರಾಧೆ-ಕೃಷ್ಣ, ಬಲರಾಮ, ವಾಸುದೇವ, ದೇವಕಿಯರ ವೇಷದಲ್ಲಿ ಗಮನ ಸೆಳೆದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಲಯಾಧಿಕಾರಿ ಡಾ.ಸಂಗೀತಾ ಮಂಠಾಳೆ ಮಾತನಾಡಿ, ಹರ ಮತ್ತು ಹರಿಯನ್ನು ಅಷ್ಟೇ ಭಕ್ತಿ, ಶೃದ್ಧೆಯಿಂದ ಪೂಜಿಸುವ ನಾಡು ನಮ್ಮದು. ಈ ಶಾಲೆಯಲ್ಲಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಸಣ್ಣ-ಸಣ್ಣ ಮಕ್ಕಳು ರಾಧೆ-ಕೃಷ್ಣರ ವೇಷ-ಭೂಷಣದಲ್ಲಿ ಕಣ್ಮನ ಸೆಳೆಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಣದ ಜತೆಗೆ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಭವ್ಯ ಸಂಸ್ಕೃತಿ ಮತ್ತು ಆದರ್ಶ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಕೆಲಸ ಸಂಸ್ಥೆಯಿಂದ ನಡೆಯುತ್ತಿದ್ದು, ಮಕ್ಕಳು ಅಭ್ಯಾಸದ ಜತೆಗೆ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕ ಎಂದರು.

ಪ್ರಗತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಗೌರೀಶ ದಾಬಕೆ, ಮುಖ್ಯಗುರು ಶ್ರೀನಾಥ ಕಣಜಿ, ಸಿಬ್ಬಂದಿ ಹಾಗೂ ಮಕ್ಕಳು ಭಾಗವಹಿಸಿದ್ದರು. ವಿದ್ಯಾರ್ಥಿ ಶೃಷ್ಟಿ ಚವ್ಹಾಣ್ ಸ್ವಾಗತಿಸಿದರು. ಏಕಾಕ್ಷ ವಂದಿಸಿದರು. ಶೃಷ್ಟಿ ಪಾಟೀಲ್ ನಿರೂಪಣೆ ಮಾಡಿದರು. ಸ್ಪೂರ್ತಿ ಸ್ವಾಮಿ ಭಾಷಣ ಗಮನ ಸೆಳೆಯಿತು. ಶಿಕ್ಷಕಿಯರು ಬಾಲ ಕೃಷ್ಣನ ತೊಟ್ಟಿಲು ಕಾರ್ಯಕ್ರಮ ನೆರವೇರಿಸಿದರು. ನಂತರ ಮೊಸರು ಗಡಿಗೆ ಒಡೆಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net