ರೇಸಿಂಗ್: ಅಭಿನ್ ರೈ ಚಾಂಪಿಯನ್

21adarshkdga3
Published on

ಮಡಿಕೇರಿ: ಚೆನೈನಲ್ಲಿ ಇತ್ತೀಚೆಗೆ ಜರುಗಿದ ಇಂಡಿಯನ್ ನ್ಯಾಷನಲ್ ರೇಸಿಂಗ್ ಚಾಂಪಿಯನ್ ಶಿಪ್ ಮೋಟಾರ್ ರ‌್ಯಾಲಿಯ ೪ ವಿಭಾಗಗಳಲ್ಲಿ ಕೊಡಗಿನ ಅಭಿನ್ ರೈ ಮೊದಲ ಸ್ಥಾನದೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.


ಮದ್ರಾಸ್ ಮೋಟಾರ್ ಸ್ಫೋರ್ಟ್ಸ್ ಕ್ಲಬ್ ಆಯೋಜಿಸಿದ್ದ ಏಷ್ಯಾ ಪೆಸಿಫಿಕ್ ಮೋಟಾರ್ ರ‌್ಯಾಲಿಯಲ್ಲಿ ಹೋಂಡಾ ಸಿಟಿ ಕಾರ್‌ನಲ್ಲಿ ಪಾಲ್ಗೊಂಡಿದ್ದ ಮೇಕೇರಿ ಗ್ರಾಮಮೂಲದ ಅಭಿನ್ ರೈ, ರಾಷ್ಟ್ರೀಯ ಮಟ್ಟದ ರ‌್ಯಾಲಿ ಚಾಲಕರಿಗೆ ಪ್ರಬಲ ಸ್ಪರ್ಧೆಯೊಡ್ಡಿದ್ದು ೬೧ ಸ್ಪರ್ಧಿಗಳ ಪೈಕಿ ಅಂತಿಮ ಹಂತದಲ್ಲಿ ೧೫ನೇ ಸ್ಥಾನ ಪಡೆದುಕೊಂಡಿದ್ದಾರೆ.


ಅಭಿನ್ ಜತೆ ನ್ಯಾವಿಗೇಟರ್ ಆಗಿ ಉದಯ್ ಕುಮಾರ್ ಪಾಲ್ಗೊಂಡಿದ್ದರು. ಈಗಾಗಲೇ ೫೩ ಪ್ರಶಸ್ತಿಗಳನ್ನು ಅಭಿನ್ ಮೋಟಾರ್ ರ‌್ಯಾಲಿ ಕ್ಷೇತ್ರದಲ್ಲಿ ತನ್ನದಾಗಿಸಿಕೊಂಡ ಹಿರಿಮೆಗೆ ಪಾತ್ರರಾಗಿದ್ದಾರೆ. ಅಭಿನ್ ರೈ ಮೇಕೇರಿ ಗ್ರಾಮದ ರತ್ನಾಕರ್ ರೈ ಮತ್ತು ನಮಿತಾ ರೈ ದಂಪತಿ ಪುತ್ರನಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net