

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ( Rachita Ram ) ಅವರು ಚಿತ್ರೀಕರಣ ಮುಗಿಸಿ ಬಂದ ನಂತರ ಪ್ರತಿ ಭಾನುವಾರ ನಿಮಗೆಲ್ಲ ಸಿಗುತ್ತೇನೆಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಇದೀಗ ಬರ್ತ್‌ಡೇ ಖುಷಿಯಲ್ಲಿದ್ದಾರೆ. ಅಕ್ಟೋಬರ್ 3 ರಚಿತಾ ಜನ್ಮದಿನ ಈ ಹಿನ್ನೆಲೆಯಲ್ಲಿ ಡಿಂಪಲ್ ಕ್ವೀನ್ ಫ್ಯಾನ್ಸ್ ನೆಚ್ಚಿನ ನಟಿಗೆ ಶುಭಾಶಯಗಳನ್ನು ರವಾನಿಸುತ್ತಿದ್ದಾರೆ. ಈ ನಡುವೆ ಅವರ ರಾಜರಾಜೇಶ್ವರಿ ನಗರದಲ್ಲಿನ ಮನೆ ಮುಂದೆಯೂ ಅಭಿಮಾನಿಗಳು ನೆರೆದಿರುತ್ತಾರೆ. ಹೀಗಾಗಿ ನಟಿ ಬರ್ತಡೇಗೆ 2 ದಿನ ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.
ರಚಿತಾ ರಾಮ್ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಏನಿದೆ?: ಎಲ್ಲರಿಗೂ ನಮಸ್ಕಾರ... ಎಲ್ಲರೂ ಚೆನ್ನಾಗಿದ್ದೀರ ಎಂದು ನಾನು ಭಾವಿಸುತ್ತೇನೆ.. ಈ ಬಾರಿ ಚಿತ್ರೀಕರಣ ಇರುವುದರಿಂದ ನನ್ನ ಹುಟ್ಟುಹಬ್ಬ ( ಅಕ್ಟೋಬರ್3 ) ಆಚರಣೆಯನ್ನು ನಾನು ಮಾಡಿಕೊಳ್ಳುತ್ತಿಲ್ಲ ಎಂದು ಹೇಳಲು ಇಚ್ಛಿಸುತ್ತೇನೆ. ಎಲ್ಲರ ಬಳಿ ಕ್ಷಮೆಯಾಚಿಸುತ್ತಾ ಎಂದಿನಂತೆ ಪ್ರತಿ ಭಾನುವಾರ ಚಿತ್ರಕರಣ ಮುಗಿಸಿ ಬಂದ ನಂತರ ಸಿಗುತ್ತೇನೆ.... ಎಂದು ಪೋಸ್ಟ್ ಮಾಡಿದ್ದಾರೆ.
ಸಂಜು ವೆಡ್ಸ್ ಗೀತಾ 2 ಸಿನಿಮಾ ಮುಗಿಯುತ್ತಿದ್ದಂತೆಯೇ ರಚಿತಾ ರಾಮ್ ತಮ್ಮ ಫ್ಯಾನ್ಸ್ ಗೆ ಹೊಸ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ (Zaid Khan) ನಟನೆಯ ಹೊಸ ಸಿನಿಮಾಗೆ ರಚಿತಾ ರಾಮ್ (Rachita Ram) ನಾಯಕಿಯಾಗಿ ಆಯ್ಕೆಯಾಗಿದ್ದಾರೆ