ಉಚಿತ ರೇಬಿಸ್ ಲಸಿಕಾ ಶಿಬಿರ

rabis
Published on

ಮಡಿಕೇರಿ:

ಸಿಂಬಾಸ್ ಹೋಮ್ ತಂಡ ಮತ್ತು ಕೊಡಗು ಜಿಲ್ಲಾ ಪಶುವೈದ್ಯಕೀಯ ಇಲಾಖೆಯ ಸಹಯೋಗದಲ್ಲಿ ಬೆಕ್ಕು ಹಾಗೂ ನಾಯಿಗಳಿಗೆ ಉಚಿತ ರೇಬಿಸ್ ಲಸಿಕಾ ಶಿಬಿರ ಶನಿವಾರ ನಡೆಯಿತು. ಕರ್ಣಂಗೇರಿ ಗ್ರಾಮದ ಮೊಣಕಾಲ್ಮುರಿ ಶಾಲಾ ಆವರಣದಲ್ಲಿ ನಡೆದ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ತಮ್ಮ ಸಾಕು ಪ್ರಾಣಿಗಳಿಗೆ ಉಚಿತ ರೇಬಿಸ್ ಲಸಿಕೆ ಹಾಕಿಸಿದರು.

ಕೊಡಗು ಪಶು ವೈದ್ಯಾಧಿಕಾರಿ ಡಾ.ತಿಮ್ಮಯ್ಯ, ಪಶು ವೈದ್ಯಕೀಯ ನಿರೀಕ್ಷಕ ಪಾಲಾಕ್ಷ, ವನಿತಾ, ಸಿಂಬಾಸ್ ಹೋಮ್ ಸಂಸ್ಥಾಪಕಿ ವಾತ್ಸಲ್ಯ ರಮೇಶ್ ಪ್ರಾಣಿಗಳಿಗೆ ಲಸಿಕೆ ನೀಡಿ, ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು. ರೇಬಿಸ್ ಕುರಿತು ಪ್ರಾಣಿ ಪಾಲಕರಿಗೆ ಮಾಹಿತಿ ನೀಡಿದರು.

ಗ್ರಾ.ಪಂ ಸದಸ್ಯ ಜಾನ್ಸನ್ ಪಿಂಟೋ, ಸ್ವಯಂ ಸೇವಕರಾದ ಗಜೇಂದ್ರ, ಶಿಲ್ಪಾ, ಮಹೇಶ್, ಎಂ.ಜಿ.ಧನ್ವಿತ್, ನಿಶಿತ್, ನಿದರ್ಶ್, ದಿಲನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net