

ವಿಜಯವಾಣಿ ಸುದ್ದಿಜಾಲ ಧಾರವಾಡ
ರವೀಂದ್ರನಾಥ ಟ್ಯಾಗೋರ ಭಾರತದ ಸಾಂಸತಿಕ ಪುನರುಜ್ಜೀವನದ ಮಹಾನ್ ವ್ಯಕ್ತಿ. ಅವರು ದೇಶ, ಕಾಲ ಮೀರಿದ ಸೃಜನಶೀಲ ಕವಿಗಳು ಎಂದುಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಡಾ. ಬಸು ಬೇವಿನಗಿಡದ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂವು ದಿ. ಪ್ರಹ್ಲಾದ ನರೇಗಲ್ ಮಾಸ್ತರ ದತ್ತಿ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಗುರುದೇವ ರವೀಂದ್ರನಾಥ ಟ್ಯಾಗೋರ ಜನ್ಮದಿನ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ರವೀಂದ್ರನಾಥ ಟ್ಯಾಗೋರ ದಾರ್ಶನಿಕ ಲೇಖಕರು ಕುರಿತು ಮಾತನಾಡಿದರು.
ಕವಿ ರವೀಂದ್ರನಾಥರು ಬಹುಮುಖ ವ್ಯಕ್ತಿತ್ವ ಉಳ್ಳ ಮೇರು ಕವಿ. ಸಾಹಿತಿ, ತತ್ವಜ್ಞಾನಿ, ಶಿಣ ತ, ಕಲಾವಿದ, ಕಥೆಗಾರ ಮಾತ್ರವಲ್ಲ ಪ್ರಸಿದ್ಧ ಸಂಗೀತ ಸಂಯೋಜಕರೂ ಆಗಿದ್ದರು. ಅವರ ಗೀತಾಂಜಲಿ ಕೃತಿಗೆ 1913ರಲ್ಲಿ ನೋಬೆಲ್ ಪುರಸ್ಕಾರ ದೊರೆಯಿತು. ಬಾಂಗ್ಲಾ ಹಾಗೂ ಶ್ರೀಲಂಕಾ ದೇಶಕ್ಕೂ ರಾಷ್ಟ್ರಗೀತೆ ರಚಿಸಿಕೊಟ್ಟ ಕೀತಿರ್ಗೆ ಭಾಜನರಾಗಿದ್ದಾರೆ ಎಂದರು.
ಅಧ್ಯತೆ ವಹಿಸಿದ್ದ ಡಾ. ಜಿನದತ್ತ ಹಡಗಲಿ ಮಾತನಾಡಿ, ಕವಿ ರವೀಂದ್ರನಾಥ ಅವರ ಗೀತಾಂಜಲಿ ಕೃತಿ ಸೌಂದರ್ಯದ ಖಣಿ. ಅವರು ದೈವಿ ಸಿದ್ಧಿಯ ಕವಿ. ಶ್ರೇಷ್ಠ ಶಿಣ ತರಾದ ಅವರು ಮಕ್ಕಳು ಪರಿಸರದ ಜತೆ ಸಾಮರಸ್ಯದಿಂದ ಬದುಕುವುದಕ್ಕಾಗಿ ಪ್ರಕೃತಿಯ ಮಡಿಲಲ್ಲೇ ಶಾಂತಿನಿಕೇತನ ಶಿಣ ಸಂಸ್ಥೆ ಸ್ಥಾಪಿಸಿದರು. ಅದು ಇಂದು ಅಂತಾರಾಷ್ಟ್ರೀಯ ಖ್ಯಾತಿ ಪಡೆದ ವಿಶ್ವವಿದ್ಯಾಲಯವಾಗಿದೆ. ರಾಷ್ಟ್ರದ ನತೆ ಶಿಣದಲ್ಲಿ ಅಡಗಿದೆ ಎಂಬ ಉದಾತ್ತ ಭಾವನೆ ಅವರದಾಗಿತ್ತು ಎಂದರು.
ಸತೀಶ ತುರಮರಿ, ಸಿ.ಯು. ಬೆಳ್ಳಕ್ಕಿ, ಎಂ.ಬಿ. ಹೆಗ್ಗೇರಿ, ಶ್ರೀಧರ ಗಸ್ತಿ, ಅಶೋಕ ಕೋರಿ, ಡಾ. ಆನಂದ ಪಾಟೀಲ, ಸುಜಾತಾ ಹಡಗಲಿ, ಎಸ್.ಕೆ. ಕುಂದರಗಿ, ದೇಸಾಯಿಗೌಡ ಪಾಟೀಲ, ಇತರರು ಇದ್ದರು.
ಡಾ. ಧನವಂತ ಹಾಜವಗೋಳ ಸ್ವಾಗತಿಸಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಎಂ.ಎಸ್. ನರೇಗಲ್ ವಂದಿಸಿದರು.