

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸ್ಥಾಪಿಸಿರುವ ದತ್ತಿ ಡಾ. ಬಿ.ವಿ. ಶಿರೂರ ಸಂಶೋಧನ 2025ರ ಪ್ರಶಸ್ತಿಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಹಸ್ತಪ್ರತಿ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ, ಹೊಸಪೇಟೆಯ ಡಾ. ಕೆ. ರವೀಂದ್ರನಾಥ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಆಯ್ಕೆ ಸಮಿತಿ ತಿಳಿಸಿದೆ.
ನಾಡಿನ ಸಂಶೋಧನಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ವಿದ್ವಾಂಸರಿಗೆ ನೀಡುವ ಪ್ರಶಸ್ತಿ 10 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ಮಾ. 1ರಂದು ಸಂಘದಲ್ಲಿ ಏರ್ಪಡಿಸಿರುವ ಡಾ. ಬಿ.ವಿ. ಶಿರೂರ ದತ್ತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆಯ್ಕೆ ಸಮಿತಿಯಲ್ಲಿ ಡಾ. ವೀರಣ್ಣ ರಾಜೂರ, ಡಾ. ಬಿ.ವಿ.ಶಿರೂರ, ಡಾ. ಸಣ್ಣವಿರಪ್ಪ ದೊಡಮನಿ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಇದ್ದರು.