ಶ್ವಾನ ಕಡಿತಕ್ಕೆ ರೇಬೀಸ್ ಲಸಿಕೆ ಅಗತ್ಯ

rabis
Published on

ನರೇಗಲ್ಲ: ನಾಯಿ ಕಚ್ಚಿದಾಗ, ತಕ್ಷಣವೇ ಗಾಯವನ್ನು ಸೋಪು ಮತ್ತು ನೀರಿನಿಂದ 10-15 ನಿಮಿಷಗಳ ಕಾಲ ಚೆನ್ನಾಗಿ ತೊಳೆಯಿರಿ. ನಂತರ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ರೇಬೀಸ್ ಲಸಿಕೆ ಪಡೆಯುವುದು ಮತ್ತು ಸೋಂಕು ತಡೆಯಲು ಸೂಕ್ತ ಚಿಕಿತ್ಸೆ ಪಡೆಯುವುದು ಮುಖ್ಯ ಎಂದು ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಲಿಂಗಯ್ಯ ಗೌರಿಮಠ ಹೇಳಿದರು.

ಸಮೀಪದ ಬೂದಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೇಬಿಸ್ ರೋಗದ ಕುರಿತು ಅರಿವು ಮತ್ತು ಉಚಿತ ಲಸಿಕಾ ಅಭಿಯಾನದಲ್ಲಿ ಅವರು ಉಪನ್ಯಾಸ ನೀಡಿದರು.

ರೋಣ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಸಿ.ಕೆ. ಕೇಸರಿ ಮಾತನಾಡಿ, ರೇಬೀಸ್‌ನಿಂದ ರಕ್ಷಿಸಿಕೊಳ್ಳಲು ಉತ್ತಮ ಮಾರ್ಗವೆಂದರೆ ಬೀದಿ ಪ್ರಾಣಿಗಳಿಂದ ಸಾಧ್ಯವಾದಷ್ಟು ದೂರವಿರಬೇಕು. ಮನೆಯಲ್ಲಿ ಸಾಕು ನಾಯಿ ಇದ್ದರೆ ಅದಕ್ಕೆ ರೇಬೀಸ್ ಲಸಿಕೆ ಹಾಕಿಸಿಸಬೇಕು ಎಂದರು.

ಮುಖ್ಯ ಶಿಕ್ಷಕ ಬಿ.ವಿ. ದೇಸಾಯಿಪಟ್ಟಿ ಮಾತನಾಡಿದರು. ಐಶ್ವರ್ಯ ಬಿಂಗಿ, ದೀಪಾ ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net