ರೇಬಿಸ್ ಬಂದರೆ ಶೇ.99ರಷ್ಟು ಸಾವು ಖಚಿತ: ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಹೇಳಿಕೆ

Rabies Vaccination Program
Published on

ಮಂಡ್ಯ: ಮಾರಣಾಂತಿಕ ರೋಗವಾಗಿರುವ ರೇಬಿಸ್‌ಗೆ ಲಸಿಕೆ ಪಡೆಯುವುದೇ ಪರಿಹಾರ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಹೇಳಿದರು.

ನಗರದ ಜಿಲ್ಲಾ ಪಾಲಿಕ್ಲಿನಿಕ್ ಆವರಣದಲ್ಲಿ ಜಿಪಂ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಪಶುಪಾಲನಾ ಪಾಲಿಕ್ಲಿನಿಕ್ ಸಹಯೋಗದಲ್ಲಿ ಶುಕ್ರವಾರ ವಿಶ್ವ ರೇಬಿಸ್ ದಿನದ ಅಂಗವಾಗಿ ಆಯೋಜಿಸಿದ್ದ ಸಾಕು ನಾಯಿ ಮತ್ತು ಬೆಕ್ಕುಗಳಿಗೆ ಉಚಿತ ರೇಬಿಸ್ ನಿರೋಧಕ ಲಸಿಕಾ ಕಾರ್ಯಕ್ರಮದಲ್ಲಿ ಮಾತನಾಡಿದರಯ,

ಲೂಯಿಸ್ ಪಾಶ್ಚರ್ ಅವರ ಸ್ಮರಣೆಗಾಗಿ ವಿಶ್ವರೇಬಿಸ್ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ರೇಬಿಸ್ ಕ್ಯಾಪಿಟಲ್ ಎಂದು ಗುರುತಿಸಲಾಗಿದೆ. ಅಂತೆಯೇ ಹೆಚ್ಚಿನ ಪ್ರಮಾಣದಲ್ಲಿ ಕರ್ನಾಟಕದಲ್ಲಿ ರೇಬಿಸ್ ಪತ್ತೆಯಾಗಿದೆ. ಈ ರೋಗ ಬಂದಂತ ವ್ಯಕ್ತಿ ಶೇ.99ರಷ್ಟು ಸಾವು ಖಚಿತ. ಆದ್ದರಿಂದ ರೇಬಿಸ್ ನಿರ್ಮೂಲನೆಗಾಗಿ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಮನೆಯಲ್ಲಿ ಸಾಕಿರುವ ಬೆಕ್ಕು ಮತ್ತು ನಾಯಿಗೆ ಸರ್ಕಾರದಿಂದ ಉಚಿತ ಲಸಿಕೆಯನ್ನು ಒಂದು ತಿಂಗಳು ಹಾಕುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು,

ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ಸುರೇಶ್ ಮಾತನಾಡಿ, ಸಾಕು ಪ್ರಾಣಿಗಳು ಮರಿ ಹಾಕಿದಾಗ ಮನುಷ್ಯರು ಹತ್ತಿರ ಹೋದಾಗ ಕಚ್ಚುವ ಸಂದರ್ಭ ಹೆಚ್ಚಿರುತ್ತದೆ. ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅದರ ನಿಯಂತ್ರಣಕ್ಕೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಪಾಲಿಕ್ಲಿನಿಕ್ ನಿರ್ದೇಶಕ ಡಾ.ಸಿದ್ದರಾಮು, ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ.ರಮೇಶರಾಜು, ಡಾ.ತ್ರಿನೇಶ್, ಡಾ.ಸಿದ್ದೇಶ್, ಡಾ.ಶಿವಯ್ಯ, ಡಾ.ಗೀತಾ, ಡಾ.ಯೋಗೇಶ್‌ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net