ನಾಯಿ ಕಚ್ಚಿದರೆ ರೇಬಿಸ್ ಲಸಿಕೆ ಪಡೆಯುವುದು ಕಡ್ಡಾಯ

HUN-SEP-28-1(RABIS DAY)
ಹುಣಸೂರು ತಾಲೂಕು ಗಾವಡಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ವಿಶ್ವ ರೇಬಿಸ್ ದಿನದ ಅಂಗವಾಗಿ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾ.ಪಂ.ಅಧ್ಯಕ್ಷೆ ಪುಟ್ಟಶೋಭಾ, ಉಪಾಧ್ಯಕ್ಷೆ ಸವಿತಾ ಶ್ರೀನಾಥ್, ಎಚ್.ಬಿ.ಹನುಮಂತು, ರಾಜಲಕ್ಷ್ಮೀ ಇತರು ಇದ್ದರು.
Published on

ಹುಣಸೂರು: ತಾಲೂಕಿನ ಗಾವಡಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಗಾವಡಗೆರೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ವಿಶ್ವ ರೇಬಿಸ್ ದಿನದ ಅಂಗವಾಗಿ ಶನಿವಾರ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.


ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಬಿ.ಹನುಮಂತು ಮಾತನಾಡಿ, ಮನುಷ್ಯನಿಗೆ ನಾಯಿ ಕಚ್ಚಿದ 15 ನಿಮಿಷದೊಳಗೆ ಗಾಯವನ್ನು ಸಾಬೂನು ಬಳಸಿ ನಲ್ಲಿ ನೀರಿನಲ್ಲಿ ತೊಳೆಯಬೇಕು. ತೊಳೆದು ಒಣಗಿದ ನಂತರ ನಂಜುನಿರೋಧಕ ಔಷಧ ಸ್ಪಿರಿಟ್‌ನ್ನು ಹಚ್ಚಬೇಕು. ನಂತರ ಸಮೀಪದ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆಯಂತೆ ರೇಬಿಸ್ ಲಸಿಕೆ ಪಡೆಯುವುದು ಕಡ್ಡಾಯ ಎಂದು ಹೇಳಿದರು.


ಒಟ್ಟು 5 ಬಾರಿ ಲಸಿಕೆಯನ್ನು ಪಡೆಯಬೇಕಿದ್ದು, ಮೊದಲ ದಿನ, ಮೂರನೇ ದಿನ, ಏಳು, ಹದಿನಾಲ್ಕು ಮತ್ತು 28ನೇ ದಿನಗಳಲ್ಲಿ ಕ್ರಮಬದ್ಧವಾಗಿ ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು. ಬೀದಿನಾಯಿಗಳ ಉಪಟಳವಿದ್ದಲ್ಲಿ ಮಕ್ಕಳನ್ನು ಬೀದಿಯಲ್ಲಿ ಆಡಲು ಬಿಡಬಾರದು. ಸಾಕುನಾಯಿಗಳು ಕಚ್ಚಿದರೂ ರೇಬೀಸ್ ರೋಗ ಬಾರದಂತೆ ಸೂಕ್ತ ಲಸಿಕೆಗಳನ್ನು ನಾಯಿಗಳಿಗೆ ಹಾಕಿಸಿಕೊಳ್ಳುವುದು ಸೂಕ್ತ. ರೇಬಿಸ್ ಲಸಿಕೆ ಹಾಕಿಸಿಕೊಳ್ಳುವ ವೇಳೆ ಮದ್ಯಪಾನ ಸೇವನೆ ಕಡ್ಡಾಯವಾಗಿ ಮಾಡಬಾರದು ಎಂದು ತಿಳಿಸಿದರು.


ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಟ್ಟಶೋಭಾ, ಉಪಾಧ್ಯಕ್ಷೆ ಸವಿತಾ ಶ್ರೀನಾಥ್, ಮುಖಂಡರಾದ ಜ್ಯೋತಿ, ಲೋಕೇಶ್, ಬಿಎಚ್‌ಒ ರಾಜಲಕ್ಷ್ಮೀ, ಶ್ರೀನಿವಾಸ್ ಸಿಂಧೆ ಇತರರು ಇದ್ದರು.


28ಊಓ1: ಹುಣಸೂರು ತಾಲೂಕು ಗಾವಡಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ವಿಶ್ವ ರೇಬಿಸ್ ದಿನದ ಅಂಗವಾಗಿ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾ.ಪಂ.ಅಧ್ಯಕ್ಷೆ ಪುಟ್ಟಶೋಭಾ, ಉಪಾಧ್ಯಕ್ಷೆ ಸವಿತಾ ಶ್ರೀನಾಥ್, ಎಚ್.ಬಿ.ಹನುಮಂತು, ರಾಜಲಕ್ಷ್ಮೀ ಇತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net