ನಾಯಿಗಳಿಗೆ ರೇಬಿಸ್ ಲಸಿಕೆ ಶಿಬಿರ

Bel_Rebis
Published on

ಬೆಳ್ತಂಗಡಿ: ಗ್ರಾಪಂ ಮುಂಡಾಜೆ, ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ ಬೆಳ್ತಂಗಡಿ, ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಸಮುದಾಯ ದಳ ಮುಂಡಾಜೆ ಆಶ್ರಯದಲ್ಲಿ ಮುಂಡಾಜೆ ಗ್ರಾಪಂ ವ್ಯಾಪ್ತಿಯಲ್ಲಿ ನಾಯಿಗಳಿಗೆ ರೇಬಿಸ್ ಲಸಿಕೆ ಶಿಬಿರ ನಡೆಯಿತು. ಗ್ರಾಪಂ ಅಧ್ಯಕ್ಷ ಗಣೇಶ ಬಂಗೇರ ಕಾರ್ಯಕ್ರಮ ಉದ್ಘಾಟಿಸಿದರು.

ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ ರಾವ್, ಮಾಜಿ ಅಧ್ಯಕ್ಷ ಎಂ.ಅನಂತ ಭಟ್, ರೋಟರಿ ಸಮುದಾಯ ದಳದ ಅಧ್ಯಕ್ಷ ವಿಘ್ನೇಶ್ ಪ್ರಭು, ಕಾರ್ಯದರ್ಶಿ ಶಶಾಂಕ ಮರಾಠೆ, ಸದಸ್ಯರು ಉಪಸ್ಥಿತರಿದ್ದರು. ಜಾನುವಾರು ಅಧಿಕಾರಿ ನಾಗಶಯನ ರಾವ್ ಹಾಗೂ ಕಿರಿಯ ಪಶು ವೈದ್ಯ ಪರೀಕ್ಷಕ ಗಂಗಾಧರ ಸ್ವಾಮಿ ಗ್ರಾಪಂ ವ್ಯಾಪ್ತಿಯ 20 ಸ್ಥಳಗಳಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ನಡೆಸಿದರು. ಒಟ್ಟು 181 ನಾಯಿಗಳಿಗೆ ಲಸಿಕೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net