

ರಬಕವಿ/ಬನಹಟ್ಟಿ: ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ಖಂಡಿಸಿ ಹಾಗೂ ನಾಲ್ವರು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ರಬಕವಿ-ಬನಹಟ್ಟಿ ತಾಲೂಕು ಮಹರ್ಷಿ ವಾಲ್ಮೀಕಿ ಸಂಘ, ರಾಜ್ಯ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಸಂಘದಿಂದ ಶನಿವಾರ ಸ್ಥಳೀಯ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ತಹಸೀಲ್ದಾರ್ ಪ್ರಶಾಂತ ಚನಗೊಂಡ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಕಾಡಪ್ಪ ಮಂಟೂರ, ಎ್.ಬಿ. ತಳವಾರ ಮಾತನಾಡಿ, ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರ ರಕ್ಷಣೆ ನೀಡುವಲ್ಲಿ ವಿಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚಂದ್ರಕಾಂತ ಪೊಲೀಸ್, ಪ್ರಕಾಶ ಸನದಿ, ಶಿವಕುಮಾರ ಕುಳ್ಳೋಳ್ಳಿ, ಕಾಶಿರಾಯ ನಾಯಕ, ಪರಸಪ್ಪ ನಾಯಕ, ರಮೇಶ ನಾಯಕ, ಪರಶುರಾಮ ಗುಬ್ಬಿ, ಮಾಳು ನಾಯಕ, ಶ್ರೀಶೈಲ ನಾಯಕ, ಮಲ್ಲಯ್ಯ ಜಕ್ಕನೂರ, ಪರಸಪ್ಪ ದೊಡಮನಿ, ರಾಮಣ್ಣ ದಳವಾಯಿ, ಭಗವಂತ ಬಿಸನಾಳ, ವಿಠ್ಠಲ ಜಕ್ಕನೂರ, ಸಂಗಪ್ಪ ಸಂತಿ, ಆನಂದ ಸಂತಿ, ಮಂಜು ನಿಡೋನಿ, ಹಾಲೇಶ ಅಡವಿಹಳ್ಳಿ, ಅರ್ಜುನ ಹಳ್ಳೂರ, ಸುರೇಶ ತಳವಾರ, ಪ್ರಭು ಬಂಡಿ, ರಾಖೇಶ ಬೀಳಗಿ, ಸಂಗಪ್ಪ ಸಂತಿ, ರಮೇಶ ಮಿಳ್ಳಿಗೇರಿ ಅನೇಕರಿದ್ದರು.