ಅನಧಿಕೃತ ಮಸೀದಿ ಕಟ್ಟಡ ತೆರವು

RBK NEWS 13-1
Published on

ರಬಕವಿ/ಬನಹಟ್ಟಿ: ಬನಹಟ್ಟಿ ನಗರದ ಸೋಮವಾರ ಪೇಟೆಯಲ್ಲಿನ ಅನಧಿಕೃತ ಮಸೀದಿ ಕಟ್ಟಡವನ್ನು ಸೋಮವಾರ ಬೆಳಗ್ಗೆ ತೆರವುಗೊಳಿಸಲಾಯಿತು. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ನಗರಸಭೆ, ಕಂದಾಯ ಹಾಗೂ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್‌ನಲ್ಲಿ ಕಾರ್ಯಾಚರಣೆ ನಡೆಯಿತು.

ಪ್ರತಿವರ್ಷ ಮೊಹರಂ ಹಬ್ಬದ ವೇಳೆ ಡೋಲಿಗಳ ಇಡುವ ಜಾಗ ಇದಾಗಿದ್ದರಿಂದ ದೇವರ ಸಾಮಗ್ರಿ ಇಡಲು ಪರ್ಯಾಯ ಜಾಗೆ ಒದಗಿಸುವಂತೆ ಮಸೀದಿಯವರು ಒತ್ತಾಯಿಸಿದರು. ಇದಕ್ಕೆ ಅಧಿಕಾರಿಗಳು ಯಾವುದೇ ಸ್ಪಷ್ಟ ಭರವಸೆ ನೀಡಲಿಲ್ಲ. ಶತಮಾನದಿಂದಲೂ ಆಚರಣೆ ಮಾಡುತ್ತಿರುವ ಹಬ್ಬಗಳಿಗೆ ಚ್ಯುತಿ ಬರದಂತೆ ಅಧಿಕಾರಿಗಳು ಸೂಕ್ತ ಸ್ಥಳಾವಕಾಶ ಕಲ್ಪಿಸಲು ಕ್ರಮ ಕೈಗೊಂಡರೆ ಅನುಕೂಲವಾಗುವುದು ಎಂದು ಸಾರ್ವಜನಿಕರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net