ತ್ರಿಶಲಾದೇವಿ ಆಸ್ಪತ್ರೆಗೆ ಗುಣಮಟ್ಟದ ಪ್ರಮಾಣ ಪತ್ರ

RBK 8-2
Published on

ರಬಕವಿ/ ಬನಹಟ್ಟಿ: ರಬಕವಿಯ ತ್ರಿಶಲಾದೇವಿ ಕಣ್ಣಿನ ಆಸ್ಪತ್ರೆ ಯುವ ವೈದ್ಯ ಡಾ. ಪದ್ಮಜೀತ ನಾಡಗೌಡ ಪಾಟೀಲ ಅವರಿಗೆ ಅಥಣಿಯಲ್ಲಿರುವ ತ್ರಿಶಲಾದೇವಿ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಸೇವೆ ಹಾಗೂ ಸೌಲಭ್ಯ ಗಮನಿಸಿ ಎನ್‌ಎಬಿಎಚ್ ಸಂಸ್ಥೆಯು ರಾಷ್ಟ್ರೀಯ ಗುಣಮಟ್ಟದ ಪ್ರಮಾಣಪತ್ರ ನೀಡಿ ಗೌರವಿಸಿದೆ. ಉತ್ತರ ಕರ್ನಾಟಕದಲ್ಲೇ ಅಂತಾರಾಷ್ಟ್ರೀಯ ಮಟ್ಟದ ಯಂತ್ರೋಪಕರಣ ಹೊಂದಿರುವ ಆಸ್ಪತ್ರೆಯಾಗಿದೆ ಎಂದು ಅದರಲ್ಲಿ ತಿಳಿಸಲಾಗಿದೆ.

ಸತತ 12 ವರ್ಷಗಳಿಂದ ಶ್ರಮಿಸುತ್ತಿರುವ ಆಸ್ಪತ್ರೆಯ ತಜ್ಞ ವೈದ್ಯ ಡಾ. ಪದ್ಮಜೀತ ನಾಡಗೌಡ ಪಾಟೀಲರ ದೂರದೃಷ್ಟಿ ಹಾಗೂ ಜನಪರ ಕಾಳಜಿ ಮೆಚ್ಚುವಂತಹದು. ಅಮೆರಿಕ, ಜರ್ಮನ್ ದೇಶಗಳಲ್ಲಿ ಚಿಕಿತ್ಸೆಗೆ ಬಳಸುವ ಉಪಕರಣಗಳನ್ನು ತಮ್ಮ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಕೆ ಮಾಡುತ್ತಿದ್ದಾರೆ. ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ತಪಾಸಣೆ ನೀಡುವ ಮೂಲಕ ಮನ್ನಣೆ ಗಳಿಸಿದ್ದಲ್ಲದೆ ಈ ಭಾಗದ ಬಡ ಕುಟುಂಬಗಳಿಗೆ ಆಶಾಕಿರಣವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net