ಸರ್ವರ್ ಸಮಸ್ಯೆ ನಿವಾರಿಸಲು ಆಗ್ರಹಿಸಿ ಮನವಿ

BKT NEWS 26-1
Published on

ರಬಕವಿ/ಬನಹಟ್ಟಿ: ನ್ಯಾಯಬೆಲೆ ಅಂಗಡಿ ಹಾಗೂ ಸೇವಾ ಕೇಂದ್ರಗಳಲ್ಲಿನ ಸರ್ವರ್ ಸಮಸ್ಯೆಯನ್ನು ನಿವಾರಿಸಬೇಕು ಎಂದು ಅಗ್ರಹಿಸಿ ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಕಾರರು ಮತ್ತು ಸಾರ್ವಜನಿಕರು ಗ್ರೇಡ್-2 ತಹಸೀಲ್ದಾರ್ ಎಸ್.ಬಿ. ಕಾಂಬಳೆ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ತಾಲೂಕಿನ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಈ ರೀತಿಯ ಸಮಸ್ಯೆ ಇದೆ. ಆದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇನ್ನು ಮುಂದೆಯಾದರೂ ಆಹಾರ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಸರ್ವರನ್ನು ಸರಿಪಡಿಸಬೇಕು. ಇಲ್ಲವಾದರೆ ಇದಕ್ಕೆ ಪರ್ಯಾಯ ವ್ಯವಸ್ಥೆ ದೊರಕಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ಗಜಾನನ ನಾಗರಾಳ, ರಾಘು ತೇಲಿ, ಕಲ್ಲಪ್ಪ ವಾಗ್ಮೋರೆ, ಬಾಳಪ್ಪ ಸಿದ್ದಪ್ಪಗೋಳ, ಶೇಖರ ಸಜ್ಜನವರ, ಹನುಮಂತ ಕುಂದಗೋಳ, ಗುರು ಗಿರಿಸಾಗರ, ಆರೀಫ್ ಕೊಣ್ಣೂರ, ಪ್ರಕಾಶ ತೇರಣಿ, ಚಂದ್ರಶೇಖರ ಅಂಬಲಿ, ಎಸ್.ಎಸ್. ಬಿದರಿ, ದಾನಪ್ಪ ಆಸಂಗಿ, ಸಂತೋಷ ಕಂಚುಣಕಿ, ಸಂಜು ಮಾಲಾಪುರ, ಶ್ರೀಧರ ಹೂಗಾರ, ಭೀಮಶಿ ಮನವಡ್ಡರ, ವಿಜಯ ಜವಳಗಿ, ಭೀಮಸಿ ಮನವಡ್ಡರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net